Skip to main content

ಸ್ವರ್ಗ ಪ್ರವೇಶಿಸಲು ಕಾರಣವಾಗುವ ಪಾಪಗಳು

ಸ್ವರ್ಗ ಪ್ರವೇಶಿಸಲು ಕಾರಣವಾಗುವ ಪಾಪಗಳು
*ಸ್ಥಾನವು ಉನ್ನತಿಗೇರಲು ಸಹಕಾರವಾಗುವ "ಪ್ರಮಾದಗಳು"....!*
🌸🌸🌸🌸🌸🌸🌸🌸🌸🌸

👉🏼 ಒಂದು ಊರಿನಲ್ಲಿ ವ್ಯಭಿಚಾರಿ ಮಹಿಳೆ ಮತ್ತು ಆಬಿದತ್ (ಅಲ್ಲಾಹನಿಗೆ ಆರಾಧನೆ) ಮಾಡುವ ಮಹಿಳೆಯರಿಬ್ಬರಿದ್ದರು. ಆಬಿದತ್ ಆದ ಹೆಣ್ಣಿಗೆ, ವ್ಯಭಿಚಾರಿ ಹೆಣ್ಣಿನ ಗೀಬತ್ ಹೇಳುವ ಕೆಟ್ಚ ಅಭ್ಯಾಸವೊಂದಿತ್ತು. ಮರಣಾನಂತರ, ಇಬಾದತ್ ಮಾಡುತ್ತಿದ್ದ ಹೆಣ್ಣು ನರಕಕ್ಕೂ,ವ್ಯಭಿಚಾರಿ ಹೆಣ್ಣು ಸ್ವರ್ಗಕ್ಕೂ ಹೋಗುವಂತಾಯಿತು (ಆಬಿದತ್ ಹೆಣ್ಣು ಗೀಬತ್ ಹೇಳಿದ್ದರಿಂದ ಅವಳ ಪುಣ್ಯಗಳು ವ್ಯಭಿಚಾರಿ ಹೆಣ್ಣಿಗೆ ವರ್ಗಾವಣೆಯಾಗಿ, ವ್ಯಭಿಚಾರಿ ಹೆಣ್ಣು ಸ್ವರ್ಗ ಪ್ರವೇಶಿಸುವಂತಾಯಿತು)

👉🏼 ಜೀವನದಲ್ಲಿ ಒಳಿತೊಂದನ್ನೂ ಮಾಡದ, ನೂರು ಜನರನ್ನು ಕೊಂದ ಪಾಪಿಯೊಬ್ಬನನ್ನು,ಅಲ್ಲಾಹು ಸ್ವರ್ಗಕ್ಕೆ ಕಳುಹಿಸಿದ.

ಈ ಚರಿತ್ರೆ ನಿಮಗೆ ಗೊತ್ತಿರಬಹುದು.
ಇದು ಯಾಕೆ ಹೇಳುತ್ತಿದ್ದೇನೆಂದರೆ, ಎಪಿ ಉಸ್ತಾದರಲ್ಲಿ ಕೆಲವೊಂದು ಸಬ್ಕುಲ್ಲಿಸಾನ್ (ಆಕಸ್ಮಿಕವಾಗಿ ನಾಲಗೆಯಿಂದ ಸಂಭವಿಸುವ ಪ್ರಮಾದ) ಆಗಿರಬಹುದು. ಕೆಲವೊಮ್ಮೆ ಬಲ ಕೈಯಲ್ಲಿ ಹಿಡಿಯುವುದನ್ನು ಎಡ ಕೈಯಲ್ಲಿ ಹಿಡಿದದ್ದಾಗಿಯೂ ಬರಬಹುದು.
ಇದನ್ನೆಲ್ಲಾ ಸಮುದಾಯದ ಮುಂದೆ ಮಹಾ ಅಪರಾಧ ವೆಂಬಂತೆ ಬಿಂಬಿಸಲು ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ.
ಇಂತಹವರ ಕೆಲಸವೇ ಇದು.ಎಪಿ ಉಸ್ತಾದರ ಹುಳುಕು ಹುಡುಕುವುದರಲ್ಲೇ ಕಾಲ ಕಳೆಯುವುದು.ಅದನ್ನು ಮಹಾ ಅಪರಾಧವೆಂಬಂತೆ ಪ್ರಚಾರ ಮಾಡುವುದು.

ಮರೆತು ಅಥವಾ ಆಕಸ್ಮಿಕವಾಗಿ ಸಂಭವಿಸುವ ಪ್ರಮಾಧಗಳು ಅಲ್ಲಾಹನಬಲಿ ಅಪರಾಧವಲ್ಲ. ಕನಿಷ್ಠ ಧಾರ್ಮಿಕ ಜ್ಙಾನ ಇರುವವರಿಗೂ ಇದು ಗೊತ್ತಿರುವಂತದ್ದು.
ಎಪಿ ಉಸ್ತಾದರಲ್ಲಿ ಇಂತಹ ಪ್ರಮಾದಗಳು ಆಗುವುದಕ್ಕೊಂದು ಕಾರಣವೂ ಇದೆ. ಇಂತಹ ಪ್ರಮಾದಗಳನ್ನೊಂದು ಅಸ್ತ್ರವನ್ನಾಗಿ ಬಳಸಿ,ವಿರೋಧಿಗಳು ಉಸ್ತಾದರ ಗೀಬತ್ ವ್ಯಾಪಕವಾಗಿ ಹೇಳುವುದರಿಂದ, ಉಸ್ತಾದರ ಸ್ಥಾನವನ್ನು ಅಲ್ಲಾಹು ಇನ್ನಷ್ಟು ಉನ್ನತಿಗೇರಿಸಲು ಕಾರಣವಾಗುತ್ತದೆ. ಟೀಕಾಕಾರರ ಟೀಕೆಗೆ ಉಸ್ತಾದ್ ವಹಿಸುವ ಕ್ಷಮೆ,ಪಾಶ್ಚಾತಾಪ, ತಖ್ವಾ ಉಸ್ತಾದರ ಪದವಿಯನ್ನು ಇನ್ನಷ್ಟು ಎತ್ತರಕ್ಕೇರಿಸುತ್ತಿದೆ.

ಸ್ವರ್ಗಕ್ಕೆ ಕಳುಹಿಸಲು ಮಹಿಳೆಯೊಬ್ಬಳನ್ನು ವ್ಯಭಿಚಾರಿ ಮಾಡಿದಹಾಗೆ, ವ್ಯಕ್ತಿಯೊಬ್ಬನನ್ನು, ನೂರು ಜನರನ್ನು ಕೊಂದ ಪಾಪಿ ಮಾಡಿದಹಾಗೆ, ಉಸ್ತಾದರ ಪದವಿಯನ್ನು ಇನ್ನಷ್ಟು ಉನ್ನತಿಗೇರಿಸಲು,ಅಲ್ಲಾಹನು, ಉಸ್ತಾದರಿಂದ  ಕೆಲವೊಂದು ಪ್ರಮಾದಗಳನ್ನು ಮಾಡಿಸುತ್ತಿದ್ದಾನೆ ಅಷ್ಟೇ.

ಮರೆವು ಒಂದು ಶಾಪವಲ್ಲ. ಯಾರಿಗೂ ಮರೆವು ಸಂಭವಿಸಬಹುದು.ಪ್ರವಾದಿ ಸ.ಅ ರಿಗೂ ಮರೆವು ಸಂಭವಿಸಿದೆ. ನಾಲ್ಕು ರಕಹತ್ ನಮಾಝ್ ಮಾಡುವಲ್ಲಿ ಎರಡು ರಕಹತ್ ನಮಾಝ್ ಮಾಡಿ ಎದ್ದು ಬಂದದ್ದೂ ಇದೆ.
(ಪ್ರವಾದಿ (ಸ.ಅ) ರ ಮರೆವು ಮನುಷ್ಯರಂತೆ ಸಾಧಾರಣ ಮರೆವು ಅಲ್ಲ.ಕೆಲವೊಂದು ವಿಷಯದಲ್ಲಿ ಪ್ರವಾದಿಯವರಿಗೆ ಅಲ್ಲಾಹನು ಮರೆವಿಸುವುದು ಶರೀಹತ್ ನಿಯಮವನ್ನು ಪ್ರಾಯೋಗಿಕವಾಗಿ ಕಳಿಸಿಕೊಡುವ ಉದ್ದೇಶದಿಂದ)

ಮರೆವು, ಕಣ್ತಪ್ಪಿನಿಂದಾಗುವ ಪ್ರಮಾದಗಳು ಅಲ್ಲಾಹನಬಳಿ ಎಂದೂ ಶಿಕ್ಷಾರ್ಹ ಅಪರಾಧವಲ್ಲ.
ನಾಲ್ಕು ರಕಹತ್ ನಮಾಝ್ ಮಾಡುವಲ್ಲಿ ಮರೆತು ಎರಡು ಅಥವಾ ಮೂರು ರಕಹತ್ ನಮಾಝ್ ಮಾಡಿದರೆ, ಆತನ ವಿಶ್ವಾಸದಲ್ಲಿ (ಯಖೀನ್) ನಾಲ್ಕು ರಕಹತ್ ಎಂದೇ ಆಗಿದ್ದರೆ, ಆತನ ನಮಾಝ್ ಸ್ವಹೀಹ್ ಆಗುತ್ತದೆ. ಆತ ಮಾಡಿದ್ದು ತಪ್ಪಾದರೂ, ಮರೆವು ಕಾರಣದಿಂದ ಅಲ್ಲಾಹು ಅವನಿಗೆ ಮಾಫಿ ಕೊಡುತ್ತಾನೆ.

ಆದರೆ, ಇನ್ನೊಬ್ಬರ ಇಂತಹ ಪ್ರಮಾದಗಳನ್ನು ಹೇಳಿ ನಡೆಯುವುದು ಮಹಾ ಅಪರಾಧವಾಗಿದೆ. "ಗೀಬತ್, ವ್ಯಭಿಚಾರಕ್ಕಿಂತಲೂ ಮಹಾ ಪಾಪ" ಎಂದು ಪ್ರವಾದಿ ಸ.ರು ಹೇಳಿದ್ದಾರೆ. "ಗೀಬತ್ ಹೇಳುವಿಕೆ"ಯು, ಇಬಾದತ್ ಮಾಡುವವನನ್ನು ನರಕಕ್ಕೂ, ಅಪರಾಧಿಯನ್ನು ಸ್ವರ್ಗಕ್ಕೂ ಕೊಂಡುಹೋಗುತ್ತದೆ ಎಂಬುದಕ್ಕೆ ಉದಾಹರಣೆಯೇ ಮೇಲೆ ತಿಳಿಸಿದ ವ್ಯಭಿಚಾರಿ ಹೆಣ್ಣಿನ ಸ್ವರ್ಗ ಪ್ರವೇಶ. ಅಷ್ಟೊಂದು ಗಂಭೀರ ವಿಷಯವಾಗಿದೆ ಗೀಬತ್ ಹೇಳುವಿಕೆ.

ಗೀಬತ್ ಹೇಳುವ ನಾಲಗೆಯಿಂದಲೂ, ಗೀಬತ್ ಹೇಳುವ ಕೂಟದಿಂದಲೂ ಅಲ್ಲಾಹು,ನಮ್ಮೆಲ್ಲರನ್ನೂ ರಕ್ಷಿಸಲಿ..ಆಮೀನ್.

ಮುಹಮ್ಮದ್ ಇಕ್ಬಾಲ್,ಮಂಗಳಪೇಟೆ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...