ವಿಷಕಾರಿ ಹಾವುಗಳ ಬಗ್ಗೆ ಇರಲಿ ಎಚ್ಚರ
*Bathi@razi...Thekkaru*
ಬೇಸಿಗೆ ಕಾಲವಾದ ಕಾರಣ ಹಾವುಗಳು, ವಿಷ ಜಂತುಗಳು ನೀರನ್ನು ಹುಡುಕಿಕೊಂಡು ಅಲ್ಲಲ್ಲಿ ಸುಳಿಯುತ್ತಿರುತ್ತವೆ.ಇದರ ಕುರಿತು ನಾವು ಜಾಗ್ರತೆ ವಹಿಸಬೇಕಾಗಿದೆ.ಮಕ್ಕಳು ಶಾಲೆಗೆ ಹೋಗುವಾಗ, ಬರುವಾಗ ಆದಷ್ಟು ಜಾಗ್ರತೆಯನ್ನು ತಿಳಿಸಿ ಒಟ್ಟಾರೆ ಪೊದೆಗಳಿರುವ ಸ್ಥಳದಲ್ಲೆಲ್ಲಾ ಓಡಾಡದಂತೆ ಎಚ್ಚರವಹಿಸಿರಿ.
ಪುಟ್ಟ ಪುಟ್ಟ ಕಂದಮ್ಮಗಳು ವಿಷಕಾರಿ ಹಾವಿಗೆ ಬಲಿಯಾಗುವುದು ಜಾಸ್ತಿ. ಮಕ್ಕಳು ಎಲ್ಲೆಂದರಲ್ಲಿ ಆಟವಾಡುತ್ತಿರುತ್ತಾರೆ. ಆದುದರಿಂದ ಮಕ್ಕಳ ಹೆತ್ತವರು ಇದರ ಬಗ್ಗೆ ಆದಷ್ಟು ಎಚ್ಚರದಿಂದಿರಬೇಕಾಗಿದೆ.
ಪ್ರಥಮ ಚಿಕಿತ್ಸೆ:-
ಹಾವು ಕಚ್ಚಿದ ತಕ್ಷಣ ಹತ್ತಿರ ಇದ್ದವರು ಏನು ಮಾಡಬೇಕು?ಈ ವಿಷಯ ಹಲವಾರು ಮಂದಿಗೆ ಗೊತ್ತೇ ಇಲ್ಲ.ಸಾಮಾನ್ಯವಾಗಿ ಹಾವು ಕಚ್ಚಿದಾಗ ವಿಷವೇರಿ ಸಾಯುವವರಿಗಿತಲೂ ಹಾವಿನ ಭಯಕ್ಕೆ ಹೃದಯಾಘಾತದಿಂದ ಸಾಯುವವರೇ ಹೆಚ್ಚು. ಹಾವಿನ ಮೇಲಿರುವ ಭಯವೇ ಇದಕ್ಕೆ ಕಾರಣ.
ಹಾವು ಕಾಲಿಗೆ ಅಥವಾ ಕೈಗೆ ಕಚ್ಚಿದರೆ ಮೊದಲು ರಕ್ತ ರವಾನೆಯಾಗುವುದು ಹೃದಯಕ್ಕೆ. ಮೊದಲನೇಯದಾಗಿ ಹಾವಿನ ಕಡಿತಕ್ಕೊಳಗಾದ ವ್ಯಕ್ತಿಯನ್ನು ತಕ್ಷಣವೇ ಸಮತಟ್ಟಾದ ಸ್ಥಳದಲ್ಲಿ ಮಲಗಿಸಿ ನಂತರ ಕಚ್ಚಿದ ಸ್ಥಳಕ್ಕಿಂತ ಸ್ವಲ್ಪ ಮೇಲಕ್ಕೆ ಬಿಗಿಯಾಗಿ ಬಟ್ಟೆಯಿಂದ ಕಟ್ಟಬೇಕು.
ಹಾವು ಪಾದಕ್ಕೆ ಕಚ್ಚಿದಾದರೆ ಕಾಲಿನ ಮೇಲ್ಬಾಗದಿಂದ ಬಟ್ಟೆ ಸುತ್ತಿಕೊಂಡು ಕೆಲಬಾಗಕ್ಕೆ ಬರಬೇಕು. ನಂತರ ತಡಮಾಡದೆ ಆಸ್ಪತ್ರೆಗೆ ಕೊಂಡು ಹೋಗಬೇಕು.ಅಥವಾ ಹಾವು ಕಚ್ಚಿದ ಸ್ಥಳದ ಸ್ವಲ್ಪ ಮೇಲೆ ಕೈಯಿಂದ ಗಟ್ಟಿಯಾಗಿ ಹಿಡಿದು (ಹತ್ತಿರವಿರುವವರು)ಹಾವು ಕಚ್ಚಿದ ಸ್ಥಳವನ್ನು ಬಾಯಿಂದ ಗಟ್ಟಿಯಾಗಿ ಚೀಪಿ ರಕ್ತವನ್ನು ತಕ್ಷಣವೇ ಹೊರ ಚೆಲ್ಲಬೇಕು.
ಕೆಲವರು ಜ್ಯೋತಿಷಿಯರ ಬಳಿ ಪಂಡಿತರ ಬಳಿ ಕೊಂಡು ಹೋಗುವವರಿದ್ದಾರೆ ಆ ರೀತಿಯ ನಿರ್ದಾರ ಸಲ್ಲದು, ಹತ್ತಿರವಿರುವ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಬೇಕು, ಅಲ್ಲಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಇರುತ್ತದೆ.
ಹಾವು ಕಚ್ಚಿದ 3 ಗಂಟೆಯಲ್ಲಿ ದೇಹಕ್ಕೆಲ್ಲಾ ವಿಷ ಹರಡಿ ಸಾವನ್ನಪ್ಪುವ ಸಾಧ್ಯತೆಯಿದೆ.
ಕೆಲವೊಂದು ವಿಷಕಾರಿ ಹಾವುಗಳು ಕಚ್ಚಿದರೆ ಶೇಕಡಾ 90% ರಷ್ಟು ಬದುಕುಳಿಯುವುದೇ ಕಡಿಮೆ.
ಆದ್ದರಿಂದ ಹಾವು ಕಚ್ಚಿದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಬೇಗನೆ ಆಸ್ಪತ್ರೆಗೆ ಸಾಗಿಸಬೇಕು.
ನಮ್ಮ ಪರಿಸರಗಳನ್ನು ವಿಷ ಜಂತುಗಳು ಬರದ ರೀತಿ ಆದಷ್ಟು ಸ್ವಚ್ಛವಾಗಿಡಬೇಕು.
ಮನೆಯ ಹತ್ತಿರವಿರುವ ಪೊದೆಗಳನ್ನು ಕಿತ್ತೆಸೆಯಬೇಕು.
ಆದಷ್ಟು ಮಕ್ಕಳನ್ನು ಒಬ್ಬಂಟಿಯಾಗಿ ಹೊರಗಡೆ ಎಲ್ಲೂ ಸುತ್ತಾಡದಂತೆ ಜಾಗ್ರತೆವಹಿಸಬೇಕು.
Comments