Skip to main content

ತಸ್ಬೀಹ್ ನಮಾಝ್ ನೀವು ನಿರ್ವಹಿಸಲು ಪುರಾವೆ ಬೇಕೆ..

ತಸ್ಬೀಹ್ ನಮಾಝ್ ನೀವು ನಿರ್ವಹಿಸಲು ಪುರಾವೆ ಬೇಕೆ..
>ನಿಸಾರ್ ಸಖಾಫಿ ಉಳ್ಳಾಲ

ತಸ್ಬೀಹ್ ನಮಾಝಿನ ಕುರಿತು ಪರಾಮರ್ಶಿಸುವ ಹದೀಸ್ ಹಲವಾರು ಸ್ವಹಾಬಿಗಳೂ ಧರಾಳ ಮುಹದ್ದೀಸ್ ಗಳು ರಿಪೋರ್ಟ್ ಮಾಡಿರುವರು...ಈ ನಮಾಝೇ ಇಲ್ಲ ಎಂದು ಹೇಳುವವರು ಇದನ್ನೇಲ್ಲಾ ಮರೆ ಮಾಚುತ್ತಿದ್ದಾರೆ.

*ಇಮಾಮ್ ಅಬೂ ದಾವೂದ್* ರಳಿಯಲ್ಲಾಹು ಅನ್ಹು ತನ್ನ *"ಸುನನ್"* ನಲ್ಲಿ ನಿವೇದನೆ ಮಾಡಿದ ಹದೀಸ್ ಹೀಗಿದೆ:

عَنْ ابْنِ عَبَّاسٍ رضي الله عنهما أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ قَالَ : ( لِلْعَبَّاسِ بْنِ عَبْدِ الْمُطَّلِبِ يَا عَبَّاسُ يَا عَمَّاهُ : أَلَا أُعْطِيكَ ، أَلَا أَمْنَحُكَ ، أَلَا أَحْبُوكَ ، أَلَا أَفْعَلُ بِكَ ، عَشْرَ خِصَالٍ إِذَا أَنْتَ فَعَلْتَ ذَلِكَ ، غَفَرَ اللَّهُ لَكَ ذَنْبَكَ أَوَّلَهُ وَآخِرَهُ قَدِيمَهُ وَحَدِيثَهُ خَطَأَهُ وَعَمْدَهُ صَغِيرَهُ وَكَبِيرَهُ سِرَّهُ وَعَلَانِيَتَهُ ، عَشْرَ خِصَالٍ أَنْ تُصَلِّيَ أَرْبَعَ رَكَعَاتٍ تَقْرَأُ فِي كُلِّ رَكْعَةٍ فَاتِحَةَ الْكِتَابِ وَسُورَةً ، فَإِذَا فَرَغْتَ مِنْ الْقِرَاءَةِ فِي أَوَّلِ رَكْعَةٍ ، وَأَنْتَ قَائِمٌ قُلْتَ : سُبْحَانَ اللَّهِ وَالْحَمْدُ لِلَّهِ وَلَا إِلَهَ إِلَّا اللَّهُ وَاللَّهُ أَكْبَرُ خَمْسَ عَشْرَةَ مَرَّةً ، ثُمَّ تَرْكَعُ ، فَتَقُولُهَا وَأَنْتَ رَاكِعٌ عَشْرًا ، ثُمَّ تَرْفَعُ رَأْسَكَ مِنْ الرُّكُوعِ ، فَتَقُولُهَا عَشْرًا ، ثُمَّ تَهْوِي سَاجِدًا ، فَتَقُولُهَا وَأَنْتَ سَاجِدٌ عَشْرًا ، ثُمَّ تَرْفَعُ رَأْسَكَ مِنْ السُّجُودِ ، فَتَقُولُهَا عَشْرًا ، ثُمَّ تَسْجُدُ فَتَقُولُهَا عَشْرًا ، ثُمَّ تَرْفَعُ رَأْسَكَ ، فَتَقُولُهَا عَشْرًا ، فَذَلِكَ خَمْسٌ وَسَبْعُونَ فِي كُلِّ رَكْعَةٍ ، تَفْعَلُ ذَلِكَ فِي أَرْبَعِ رَكَعَاتٍ ، إِنْ اسْتَطَعْتَ أَنْ تُصَلِّيَهَا فِي كُلِّ يَوْمٍ مَرَّةً ، فَافْعَلْ فَإِنْ لَمْ تَفْعَلْ فَفِي كُلِّ جُمُعَةٍ مَرَّةً ، فَإِنْ لَمْ تَفْعَلْ فَفِي كُلِّ شَهْرٍ مَرَّةً ، فَإِنْ لَمْ تَفْعَلْ فَفِي كُلِّ سَنَةٍ مَرَّةً ، فَإِنْ لَمْ تَفْعَلْ ، فَفِي عُمُرِكَ مَرَّةً

*"ಇಬ್ನು ಅಬ್ಬಾಸ್ ರಳಿಯಲ್ಲಾಹು ಅನ್ಹು ರವರಿಂದ ನಿವೇದನೆ: ಅಬ್ಬಾಸ್ ರಳಿಯಲ್ಲಾಹು ಅನ್ಹು ರವರೊಂದಿಗೆ ನೆಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಈ ರೀತಿ ಹೇಳಿದರು: 'ಅಬ್ಬಾಸ್ ರಳಿಯಲ್ಲಾಹು ಅನ್ಹು ರವರೇ,! ತಮಗೆ ನಾನೊಂದು ಸನ್ಮಾನ ನೀಡುವೆನು. ಅದು ನೀವು ಪ್ರವರ್ತಿಸಿದರೆ ಹತ್ತು ವಿಧ ಪಾಪಗಳನ್ನು ಅಲ್ಲಾಹನು ಮನ್ನಿಸುವನು.ಅಥವಾ ಆರಂಭದ ಕೊನೆಯ ಹೊಸತು ಹಳೆಯದೂ ಬೈ ಮಿಸ್ಟಿಕ್ ಆಗಿ ಉಂಟಾದದ್ದೂ ಮನ ಪೂರ್ವಕವಾಗಿ ಮಾಡಿದ್ದೂ ಸಣ್ಣದೂ ದೊಡ್ಡದೂ ರಹಸ್ಯವಾದದ್ದೂ ಪರಸ್ಯವೂ ಇವುಗಳಾಗಿದೆ ಹತ್ತು ವಿಧ ಪಾಪಗಳು.4 ರಕ ಅತ್ ತಾವು ನಮಾಝ್ ನಿರ್ವಹಿಸಿರಿ.ಒಂದೊಂದು ರಕ ಅತ್ ನಲ್ಲೂ ಫಾತಿಹಾ ಸೂರತ್ ಓದಿರಿ.ಪ್ರಥಮ ರಕ ಅತ್ ನಿಂದ ಕುರ್ ಆನ್ ಪಾರಯಣದಿಂದ ವಿರಮಿಸಿದರೆ ನಿತ್ತು ಕೊಂಡು 15 ಸಲ. " ಸುಬ್ ಹಾನಲ್ಲಾಹೀ ವಲ್ ಹಂದು ಲಿಲ್ಲಾಹಿ ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್" ಎಂದು ಹೇಳಿರಿ. ನಂತರ ರುಕೂಅ್ ನಲ್ಲಿ 10 ಸಲ..ನಂತರ ಇಅ್ತಿದಾಳ್ ನಲ್ಲಿ 10 ಸಲ..ನಂತರ ಸುಜೂದ್ ನಲ್ಲಿ 10 ಸಲ..ನಂತರ ಸುಜೂದ್ ನ ಎಡೆಯಲ್ಲಿ ರುವ ಕುಳ್ಳಿತು ಕೊಳ್ಳುವಿಕೆಯಲ್ಲಿ 10 ಸಲ..ನಂತರ ಮಗದೊಮ್ಮೆ ಸುಜೂದ್ ಗೆ ಹೋಗಿ ಅಲ್ಲಿ 10..ನಂತರ ಸುಜೂದ್ ನಿಂದ ಎದ್ದೇಳಿ ಇಸ್ತಿರಾಹತ್ನ ಕುಳ್ಳಿತುಕೊಳ್ಳುವಿಕೆಯಲ್ಲಿ 10 ಸಲ ಪ್ರಸ್ತುತ ದ್ಸಿಕ್ರ್ ಹೇಳಿರಿ.ಇದೇ ರೀತಿ ಒಂದೊಂದು ರಕ ಅತ್ ನಲ್ಲೂ 75 ಸಲ ತಸ್ಬೀಹ್ ಹೇಳಬೇಕು. ದಿವಸಗಳಲ್ಲಿ ಒಂದೊಂದು ಸಲ ಈ ರೀತಿಯಾಗಿ ನಮಾಝ್ ಮಾಡುವುದಾದರೆ ಹಾಗೆ ನಿರ್ವಹಿಸಿ..ಅದಕ್ಕೆ ಸಾಧ್ಯವಾಗದಿದ್ದರೇ ಎಲ್ಲಾ ಶುಕ್ರವಾರ ದಂದು ನಿರ್ವಹಿಸಿರಿ..ಅದು ಅಸಾಧ್ಯ ವಾದರೇ ತಿಂಗಳಲ್ಲಿ ಒಂದು ಸಲ ನಿರ್ವಹಿಸಿ.ಅದು ಅಸಾಧ್ಯ ವಾದರೆ ವರ್ಷಕ್ಕೆ ಒಂದು ಸಲ ನಿರ್ವಹಿಸಿರಿ..ಅದು ಅಸಾಧ್ಯ ವಾದರೇ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನಿರ್ವಹಿಸಿರಿ."*

(ಅಬೂ ದಾವೂದ್, ತುರ್ಮುದ್ಸಿ)

ಈ ಹದೀಸ್ ನಿರ್ಮಿತವಾಗಿದೆ ಎಂದು ಹೇಳಿದ ಇಬ್ನುಲ್ ಜೌಝಿ ಯ ಹೇಳಿಕೆ ಯನ್ನು ಪಂಡಿತ ಲೋಕವು ವಿಮರ್ಶಿಸಿರುವರು..

*ಇಮಾಮ್ ಸುಯೂತ್ವೀ ರಹ್ಮತುಲ್ಲಾಹಿ ಅಲೈಹಿ* ರವರು ಹೇಳುತ್ತಾರೆ:

 أفرط ابن الجوزي فأورد هذا الحديث فِي كتاب الموضوعات وأعله بموسى بْن عبد العزيز ، وقال : أنه مجهول ، قَالَ الحافظ بْن حجر : فِي الخصال المكفرة للذنوب المقدمة والمؤخرة أساء ابن الجوزي بذكر هذا الحديث فِي الموضوعات وقوله إن موسي مجهول لم يصب فيه فإن ابن معين والنسائي وثقاه ، وقال ابن حجر فِي أماني الأذكار هذا الحديث أخرجه البخاري من جزء القراءة خلف الإمام ، وأبو داود وابن ماجة ، وابن خزيمة فِي صحيحه ، والحكم فِي مستدركه ، وصححه ، والبيهقي

ಈ ಹದೀಸನ್ನು ನಿರ್ಮಿತ ಹದೀಸ್ (ಮೌಳೂಅ್)  ನ ಗುಂಪಿಗೆ ಸೇರಿಸಿದ ಇಬ್ನುಲ್ ಜೌಝಿ ಯವರು ವಿಪರೀತ ಪತನ ಕಂಡಿರುವರು. ಮೂಸಬ್ನುಲ್  ಅಬ್ದುಲ್ ಅಝೀಝ್ ಎಂಬ ರಿಪೋರ್ಟರ್ ಅನಾಮಧೇಯ(ಮಜ್ಹೂಲ್) ಎಂಬುದಾಗಿದೆ ಅದಕ್ಕೆ ಕಾರಣ ವಾಗಿ ಅವರು ಹೇಳುವುದು. "ಅಲ್ ಖಿಸಾಲುಲ್ ಮುಕಫ್ ಫಿರ ಲಿದ್ದುನೂಬಿಲ್ ಮುಖದ್ದಮ ವಲ್ ಮುಅಖ್ ಖರ" ಎಂಬ ಗ್ರಂಥ ದಲ್ಲಿ ಹಾಫಿಳ್ ಅಬುಲ್ ಫಳ್ಲ್ ಇಬ್ನು ಹಜರ್ ರಹ್ಮತುಲ್ಲಾಹಿ ಅಲೈಹಿ ರವರು ಉಲ್ಲೇಖಿಸುತ್ತಾರೆ: ಈ ಹದೀಸನ್ನು ನಿರ್ಮಿಸಿದ ಹದೀಸ್ ಗಳ ಗುಂಪಿನಲ್ಲಿ ಕಂಡು ಇಬ್ನು ಲ್ ಜೌಝಿ ರವರು ಕೆಟ್ಟದಾದ ಕಾರ್ಯ ಮಾಡಿರುವರು.ಮೂಸಬ್ನು ಅಬ್ದುಲ್ ಅಝೀಝ್ ಎಂಬ ರಿಪೋರ್ಟರ್ ಮಜ್ಹೂಲ್ ಎಂಬ ಅವರ ಪ್ರಸ್ತಾವನೆಗೆ ಅವರು ವಾಸ್ತವ ಕಂಡು ಹಿಡಿದಿಲ್ಲ.ಕಾರಣ, ಇಬ್ನು ಮ ಈನೂ ರಹ್ಮತುಲ್ಲಾಹಿ ಅಲೈಹಿ, ನಸಾಈ ರಹ್ಮತುಲ್ಲಾಹಿ ಅಲೈಹಿ ರವರು ಅವರು ವಿಶ್ವಾಸ ಯೋಗ್ಯರೆಂದು ಪ್ರಸ್ತಾವಿಸಿದ್ದಾರೆ. " ಅಮಾಲಿಲ್ ಅದ್ಸ್ ಕಾರ್" ಎಂಬ ಗ್ರಂಥ ದಲ್ಲಿ ಇಬ್ನು ಹಜರ್ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ: 'ಅಲ್ ಖಿರಾಅತು ಖಲ್ಫಲ್ ಇಮಾಮಿ'  ಎಂಬ ಗ್ರಂಥದಲ್ಲಿ ಇಮಾಮ್ ಬುಖಾರಿ ರಳಿಯಲ್ಲಾಹು ಅನ್ಹು  ಈ ಹದೀಸ್ ಉದ್ದರಿಸಿರುವರು. ಅಬೂ ದಾವೂದ್ ರಳಿಯಲ್ಲಾಹು ಅನ್ಹು, ಇಬ್ನು ಮಾಜ ರಳಿಯಲ್ಲಾಹು ಅನ್ಹು, ಇಬ್ನು ಖುಸೈಮ ರಳಿಯಲ್ಲಾಹು ಅನ್ಹು ರವರು ತನ್ನ 'ಸ್ವಹೀಹ್' ನಲ್ಲೂ, ಹಾಕಿಮ್ ರಳಿಯಲ್ಲಾಹು ಅನ್ಹು ರವರು ತನ್ನ 'ಮುಸ್ತದ್ ರಖ್' ನಲ್ಲೂ ಪ್ರಸ್ತುತ ಹದೀಸ್ ಉದ್ಧರಿಸಿರುವರು. ಇಮಾಮ್ ಬೈಹಖಿ ರಳಿಯಲ್ಲಾಹು ಅನ್ಹು ರವರು ಇತರರು ಆ ಹದೀಸ್ ಪ್ರಬಲವೆಂದು ಪ್ರಖ್ಯಾಪಿಸುರುವರು." (ಔನುಲ್ ಮ ಅ್ ಬೂದ್ 3/247)

*ಇಬ್ನು ಶಾಹೀನ್ ರಳಿಯಲ್ಲಾಹು ಅನ್ಹು* ರವರು *'ತರ್ ಗೀಬ್'* ಎಂಬ ಗ್ರಂಥ ದಲ್ಲಿ ಹೇಳುತ್ತಾರೆ:

وقال ابن شاهين في الترغيب سمعت أبا بكر بن أبي داود يقول سمعت أبي يقول أصح حديث في صلاة التسبيح هذا قال وموسى بن عبد العزيز وثقه ابن معين والنسائي وابن حبان وروى عنه خلق وأخرجه البخاري في جزء القراءة هذا الحديث بعينه وأخرج له في الأدب حديثا في سماع الرعد وببعض هذه الأمور ترتفع الجهالة

ಈ ಮೇಲಿನ ಉದ್ದರಣಿಗಳೊಂದಿಗೆ ಸಾಮ್ಯತೆ ಇರುವ ವಿಷಯವೇ ಆಗಿದೆ ಈ
 ಇಬಾರತ್ ನಲ್ಲಿ ಇರುವುದು..

*ಇಮಾಮ್ ಝರ್ಕಷಿ* ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ:

وقال الزركشي: غلط ابن الجوزي بلا شك في جعله من الموضوعات، لأنه رواه من ثلاثة طرق أحدها حديث ابن عباس وهو صحيح وليس بضعيف فضلا عن أن يكون موضوعا وغاية ما علله بموسى بن عبد العزيز فقال مجهول وليس كذلك، فقد روى عنه بشر بن الحكم وابنه عبد الرحمن وإسحاق بن أبي إسرائيل وزيد بن المبارك الصنعاني وغيرهم. وقال فيه ابن معين والنسائي ليس به بأس ولو ثبتت جهالته لم يلزم أن يكون الحديث موضوعا........

"ಈ ಹದೀಸನ್ನು ಮನುಷ್ಯ ನಿರ್ಮಿತವಾದ ಹದೀಸ್ ಗಳ ಗುಂಪಿನಲ್ಲಿ ಸೇರಿಸಿದುದರಲ್ಲಿ ಇಬ್ನು ಜೌಝಿ ರಹ್ಮತುಲ್ಲಾಹಿ ಅಲೈಹಿ ರವರಿಗೆ ತಪ್ಪು ಗ್ರಹಿಕೆ ಸಂಭವಿಸಿದೆ. ಕಾರಣ, ಮೂರು ಪರಂಪರೆಯಲ್ಲೂ ಪ್ರಸ್ತುತ ಹದೀಸ್ ನಿವೇದನೆ ಗೈಯ್ಯಲ್ಪಟ್ಟಿದೆ.ಒಂದು ಇಬ್ನು ಅಬ್ಬಾಸ್ ರಳಿಯಲ್ಲಾಹು ಅನ್ಹು ರವರ ಹದೀಸಾಗಿದೆ ಇದು ಸ್ವಹೀಹ್ ಆಗಿದೆ.ಅದು ದುರ್ಬಲ ಕೂಡಾ ಅಲ್ಲ. ಅದು ಮನುಷ್ಯ ನಿರ್ಮಿತ ವಾಗುವುದು ನಂತರವಲ್ಲವೇ........

*ಮುಸ್ನದುಲ್ ಫಿರ್ದೌಸ್* ಎಂಬ ಗ್ರಂಥ ದಲ್ಲಿ *ದೈಲಮಿ ರಳಿಯಲ್ಲಾಹು ಅನ್ಹು* ರವರು ಹೇಳುತ್ತಾರೆ:

وقال الديلمي فِي مسند الفردوس : صلاة التسبيح أشهر الصلوات وأصحها إسنادا

" ತಸ್ಬೀಹ್ ನಮಾಝ್ ಪ್ರಸಿದ್ಧ ವೂ ಪ್ರಬಲವೂ ಆದ ಪರಂಪರೆಯ ಲ್ಲಿ ಸ್ಥಿರ ಪಟ್ಟದ್ದು".

 *ಕೆಲವೊಂದು ಇಬಾರತ್ ಗಳು*
 وروى البيهقي وغيره عن أبي [ ص: 131 ] حامد الشرفي قال كنت عند مسلم بن الحجاج ومعنا هذا الحديث فسمعت مسلما يقول لا يروى فيها إسناد أحسن من هذا .
▪▪▪
وقال الترمذي : قد رأى ابن المبارك وغيره من أهل العلم صلاة التسبيح وذكروا الفضل فيها . وقال البيهقي : كان عبد الله بن المبارك يصليها وتداولها الصالحون بعضهم عن بعض ، وفيه تقوية للحديث المرفوع
▪▪▪


ಮೊತ್ತದಲ್ಲಿ ಹಲವಾರು ಪರಂಪರೆಯಿಂದ ಧರಾಳ ಸ್ವಹಾಬಿಗಳಿಂದ ಉದ್ಧರಿಸಲ್ಪಟ್ಟ ಸುನ್ನತ್ತಾಗಿದೆ ತಸ್ಬೀಹ್ ನಮಾಝ್. ಇದರ ಕುರಿತಾ ಹದೀಸ್ ನಿರ್ಮಿತ ಎಂಬ ಇಬ್ನುಲ್ ಜೌಝಿ ರವರ ವಾದವನ್ನು ಅತಿ ಗಂಭೀರವಾಗಿ ಪಂಡಿತರು ಗಳು ವಿಮರ್ಶಿಸುತ್ತಾರೆ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...