ಹಝ್ರತ್ ಉಮರ್ (ರ) ರ ಭಯದಿಂದ ಶೇಂದಿ ಸುರ್ಕವಾದ ಕತೆ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ಒಮ್ಮೆ ಇಸ್ಲಾಮಿನ ಎರಡನೇ ಖಲೀಫಾ ಹಝ್ರತ್ ಉಮರ್ ಬಿನ್ ಅಲ್ ಖತ್ತಾಬ್ (ರ) ರು ಮದೀನಾ
ಪಟ್ಟಣದ ಒಂದು ಒಳದಾರಿಯಾಗಿ ಹಾದು ಹೋಗುತ್ತಿದ್ದಾಗ ಅದೇ ದಾರಿಯಲ್ಲಿ ಎದುರಿನಿಂದ ಒಬ್ಬ ಯುವಕ ಬರುತ್ತಿದ್ದ. ಯುವಕನಿಗಾದರೆ ದಿನಾಲೂ ಒಂದು ಅರುವತ್ತು ಹೊಟ್ಟೆಗೆ ಹಾಕದಿದ್ದರೆ ಆ ದಿನವನ್ನು ಮುಂದೂಡುವುದೇ ಬಹಳ ಕಷ್ಟವಾಗುತ್ತಿತ್ತು.
▪ಒಂದು ಬಾಟಲಿ ತುಂಬಾ ಶೇಂದಿಯಾಗಿ ಬರುತ್ತಿದ್ದ ಆ ಯುವಕ ಹಝ್ರತ್ ಉಮರ್ (ರ) ರನ್ನು ದೂರದಿಂದ ಕಂಡಾಗಲೇ ಇನ್ನು ಬಚಾವು ಅಗುವುದು ಕಷ್ಟವೆಂದು ಭಾವಿಸಿ ಆತ ಕೂಡಲೇ ಅದನ್ನು ತನ್ನ ಲುಂಗಿಯ ಒಳಗೆ ತೂರಿಸಿದ.
▪ಹಝ್ರತ್ ಉಮರ್ (ರ) ರು ಹತ್ತಿರ ಸಮೀಪಿಸುತ್ತಿದ್ದಂತೆಯೇ ಇವನ ಹೃದಯ ಬಡಿತ ಬಹಳ ಜೋರಾಗ ತೊಡಗಿತು. ಮರಣವನ್ನು ಮುಖಾಮುಖಿ ಕಂಡ ಈತ ಇನ್ನು ತಲೆ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಲೆಕ್ಕ ಹಾಕಿದ. ದೂರದಿಂದಲೇ ಶೇಂದಿ ಬಾಟಲಿಯನ್ನು ಲುಂಗಿಯೊಳಗೆ ತೂರಿಸಿ ಇಡುವುದನ್ನು ಕಂಡ ಹಝ್ರತ್ ಉಮರ್ (ರ) ಅವನು ಹತ್ತಿರ ಸಮೀಪಿಸಿದಾಗ ಅವನಲ್ಲಿ ಕೇಳಿದರು. *"ಹೇ.. ಏನಾ.. ಲುಂಗಿಯೊಳಗೆ ತೂರಿಸಿಟ್ಟಿರುವುದು.?"* ಮಾಡಿದ ಕೃತ್ಯ ಸಂಪೂರ್ಣ ತಪ್ಪೆಂದು ಮನವರಿಕೆಯಾದ ಆತ ಮನದಲ್ಲೇ ಹೇಳಿಕೊಂಡ. *"ಅಲ್ಲಾಹ್...ನಾನು ಮಾಡಿದ್ದು ಮಹಾ ತಪ್ಪು. ಯಾವ ಕಾರಣಕ್ಕೂ ನನ್ನನ್ನು ನೀನು ಹಝ್ರತ್ ಉಮರ್ (ರ) ರ ಎದುರಲ್ಲಿ ಅಪಮಾನ ಮಾಡಬಾರದು. ಅವರೆದುರಲ್ಲಿ ನಾಳೆ ತಲೆ ತಗ್ಗಿಸಿ ನಡೆಯುವ ಒಂದು ನಾಚಿಕೆಗೇಡಿನ ಅವಸ್ಥೆಗೆ ನೀನು ನನ್ನನ್ನು ತಲುಪಿಸಬಾರದು. ನಾನು ಮಾಡಿದ ಈ ಪಾಪವನ್ನು ನೀನು ನನಗೆ ಮನ್ನಿಸಿ ದಯಮಾಡಿ ಅವರ ಎದುರಲ್ಲಿ ಬಚಾವು ಮಾಡಬೇಕು. ದೇವರಾಣೆ ಮುಂದಕ್ಕೆ ನಾನು ಯಾವತ್ತೂ ಕುಡಿಯಲಾರೆ"* ನಂತರ ಹಝ್ರತ್ ಉಮರ್ (ರ) ರಲ್ಲಿ ಹೇಳಿದ. "ಇದು *ಸುರ್ಕ* ಖಲೀಫರವರೇ..."
▪ಖಲೀಫರು ಹೇಳಿದರು. *"ಹಾ ಸುರ್ಕವಾ ಶೇಂದಿಯಾಂತ ನಾನು ನೋಡಿ ಖಚಿತಪಡಿಸುತ್ತೇನೆ. ಮುಚ್ಚಳ ತೆಗೆದು ತೋರಿಸು"* ಸುಬ್‌ಹಾನಲ್ಲಾಃ.. ತೆರೆದು ನೋಡಿದಾಗ ಶೇಂದಿ ಸುರ್ಕವಾಗಿ ಮಾರ್ಪಟ್ಟಿತ್ತು!!!.
▪ಅಲ್ಲಾಹನ ದಾಸನೊಬ್ಬನು ಬೇರೊಬ್ಬ ದಾಸನನ್ನು ಭಯಪಟ್ಟಾಗ ಮಾಡಿದ ತೌಬಾಕ್ಕೆ ಇಷ್ಟೊಂದು ಪರಿಣಾಮಕಾರಿ ಫಲಿತಾಂಶ ದೊರೆಯಿತೆಂದಾದರೆ, ಅಲ್ಲಾಹನನ್ನು ಭಯಪಟ್ಟು ಅಲ್ಲಾಹನಲ್ಲಿ ಪ್ರಾಮಾಣಿಕವಾಗಿ ಮಾಡುವ ತೌಬಾದ ಫಲಿತಾಂಶ ಏನಾಗಿರಬಹುದು.? ಆಗ ಅಲ್ಲಾಹನು ಅವನ ಪಾಪವೆಂಬ ಶೇಂದಿಯನ್ನು ಸತ್ಕರ್ಮವೆಂಬ ಸುರ್ಕವಾಗಿ ಮಾರ್ಪಡಿಸದಿರುವನಾ.?
▪ಸಂಗ್ರಹ : ಹುಜ್ಜತುಲ್ ಇಸ್ಲಾಮ್ ಇಮಾಮ್ ಗಝ್ಝಾಲಿಯ *ಮುಖಾಷಫತುಲ್ ಖುಲೂಬ್ ಅಲ್ ಮುಖರ್ರಿಬಿ ಇಲಾ ಅಲ್ಲಾಮಿಲ್ ಗುಯೂಬ್* ಎಂಬ ಗ್ರಂಥ.
Comments