Skip to main content

ರಮಳಾನ್ ಗೈಡ್ -2

●▬▬▬๑۩﷽۩๑▬▬▬▬●

🕋🌹🕋 *ಹಝುಮ* 🕋🌹🕋

🌷🌷🌷🌷🌷🌷🌷🌷🌷🌷🌷

📚📚 *ರಮಳಾನ್ ಗೈಡ್ -2*📚📚

✡ ವ್ರತದ ಪರ್ಳ್ ಎರಡು

1⃣ *ನಿಯ್ಯತ್*
2⃣ *ಉಪವಾಸ ಕೆಡುವ ಕಾರ್ಯಗಳಿಂದ ದೂರವಿರುವುದು*

☪  *ಉಪವಾಸ ಕೆಡುವ ಕಾರ್ಯಕ್ರಮಗಳು*

1⃣ *ತೆರೆದ ದ್ವಾರಗಳ ಮೂಲಕ ( ಬಾಯಿ,ಮೂಗು,ಕಿವಿ,ಗುಪ್ತಾಂಗ) ಯಾವುದಾದರೊಂದು ವಸ್ತು ಒಳ ಪ್ರವೇಶಿಸುವುದು.*

👉 ಮರೆತು ತಿಂದರೆ ಉಪವಾಸ ಕೆಡುವುದಿಲ್ಲ.

👉 ಖಡ್ಡಾಯ ಮತ್ತು ಸುನ್ನತ್ ಸ್ನಾನ ಮಾಡುವಾಗ ಜಾಗೃತೆ ಪಾಲಿಸಿಯೂ ನೀರು ಒಳ ಹೋದರೆ ಉಪವಾಸಕ್ಕೆ ತೊಂದರೆ ಇಲ್ಲ.

👉 ಕಿವಿಗೆ ಬಡ್ಸ್, ಮೂಗಿಗೆ ಮದ್ದು,ಹೊಟ್ಟೆಗೆ ಇಂಜೆಕ್ಷನ್ ಕೊಡುವುದರಿಂದ ಉಪವಾಸ ಬಾತಿಲ್ ಆಗುತ್ತದೆ.
👉 ಉಗುಳು ನುಂಗಿದರೆ ಉಪವಾಸ ಕೆಡುವುದಿಲ್ಲ.

2⃣ *ಸಂಭೋಗ ನಡೆಸುವುದು*

3⃣ *ಸ್ವಪ್ರಯತ್ನ ದಿಂದ ವೀರ್ಯ ಸ್ಖಲನ‌ ಮಾಡುವುದು.*
👉  ಸ್ವಪ್ನ ಸ್ಖಲನವಾದರೆ ಉಪವಾಸ ಕೆಡುವುದಿಲ್ಲ.
👉 ಬಲವಂತವಾಗಿ ಮಾಡಿಸಿದರೂ ಉಪವಾಸ ಕೆಡುವುದಿಲ್ಲ.

4⃣ *ಬಾಯಿಗೆ ಕೈ ಹಾಕಿ ವಾಂತಿ ಮಾಡುವುದು.*
👉 ಆಕಸ್ಮಿಕವಾಗಿ ವಾಂತಿ ಮಾಡಿದರೆ ಉಪವಾಸ ಕ್ಕೆ ತೊಂದರೆ ಇಲ್ಲ.

☪  *ಉಪವಾಸಿಗ ಮತ್ತು ಇಫ್ತಾರ್ ಕೂಟ*

ಇಫ್ತಾರ್ ಕೂಟ ನಡೆಸಿದರೆ ಸಿಗುವ ಪ್ರತಿಫಲದ ಕುರಿತು ವಿವರಿಸಲಾಗಿದೆ. ಇಫ್ತಾರ್ ಕೂಟ ನಡೆಸಿದವನಿಗೆ ಉಪವಾಸ ಹಿಡಿದವನ ಅದೇ ಪುಣ್ಯ ಲಭ್ಯವಿದೆ. ಒಂದು ದಿನದಲ್ಲಿ ಎರಡು ಉಪವಾಸದ ಪುಣ್ಯ  ಇಚ್ಚಿಸುವವರು ಇಫ್ತಾರ್ ಕೂಟ ನಡೆಸಲಿ.

ಇಫ್ತಾರ್ ಕೂಟ ಎಂದ ತಕ್ಷಣ ನಮ್ಮ ತಲೆಯೊಳಗೆ ಒಗ್ಗುವುದು ಬಿರಿಯಾನಿ  ಸಹಿತ ಬಗೆ,ಬಗೆಯ ಸರ್ಬತ್ತುಗಳು, ಹಣ್ಣು ಗಳು ,ಕರಿದ ಪದಾರ್ಥಗಳಾಗಿವೆ. ಇವುಗಳಿದ್ದರೆ ಮಾತ್ರ ಇಫ್ತಾರ್ ಕೂಟ ಸಾರ್ಥಕ ಎಂಬ ಭಾವನೆ ನಮ್ಮಲ್ಲಿ ಅನೇಕರಲ್ಲಿದೆ.

ಶ್ರೀಮಂತರು ಇಫ್ತಾರ್ ಕೂಟ ನಡೆಸುವಾಗ ಅವರ ಘನತೆಗೆ ತಕ್ಕಂತೆ ಗ್ರಾಂಡ್ ಇಫ್ತಾರ್ ಕೂಟ ನಡೆಸಬಹುದು.ಆದರೆ, ಸಾಧಾರಣ ದುಡಿಮೆಯಲ್ಲಿ ಜೀವನ ಸಾಕಿಸುವವರು ಆ ರೀತಿಯ ಇಫ್ತಾರ್ ಕೂಟ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಇಫ್ತಾರ್ ಕೂಟ ನಡೆಸದೆ ತಮಗೆ ಸಿಗುವ ಪ್ರತಿಫಲ ದಿಂದ ವಂಚಿತರಾಗುತ್ತಿದ್ದಾರೆ.

ಇಫ್ತಾರ್ ನಡೆಸಲು ಮನಸ್ಸು ಇರುವವರು ಚಿಂತಿಸಬೇಕಾಗಿಲ್ಲ. ತಮಗೆ ಸಾಧ್ಯವಾದ ರೀತಿಯಲ್ಲಿ ನಡೆಸಿದರೂ ಉಪವಾಸದ ಪುಣ್ಯ ಲಭಿಸುತ್ತದೆ.ಒಂದು ಪ್ಯಾಕ್  ಖರ್ಜೂರ ಪಡೆದು ಅದನ್ನು ಉಪವಾಸಿಗರಿಗೆ ವಿತರಿಸಿದರೆ ಸಾಕು.ಹತ್ತು ಮಂದಿಗೆ ಹತ್ತು ಖರ್ಜುರ ನೀಡಿದರೆ ಹತ್ತು‌ ಜನರ ಉಪವಾಸದ ಪುಣ್ಯ ಲಭಿಸುತ್ತದೆ.ಹೀಗೆ ಕಡಿಮೆ ಖರ್ಚಿನಲ್ಲಿ ಅಪಾರ ಪುಣ್ಯ ಲಭಿಸುವ ಇಪ್ತಾರ್ ಅನ್ನು ಮಿಸ್ ಮಾಡಿಕೊಳ್ಳಬೇಡಿ.

*ಇನ್ನು ಕೆಲವು ಉಪವಾಸಿಗರಿಗೆ ಒಂದು ತಪ್ಪು ಕಲ್ಪನೆ ಇದೆ. ಇಫ್ತಾರ್ ಕೂಟಕ್ಕೆ ಹೋದರೆ ನಾವು ಹಿಡಿದ ಉಪವಾಸದ ಪ್ರತಿಫಲ ಇಫ್ತಾರ್ ಮಾಡಿಸಿದಾತನಿಗೆ ಸಿಗುತ್ತದೆ ಹಾಗೂ ನಮಗೆ ಪ್ರತಿಫಲ ನಷ್ಟವಾಗುತ್ತದೆ ಎಂದು.* ವಾಸ್ತವದಲ್ಲಿ ಇದು ನಮ್ಮ ಅರಿವಿನ ಕೊರತೆಯಾಗಿದೆ.‌ನಾವು ಮಾಡುವ ಯಾವುದೇ ಪುಣ್ಯ ಕಾರ್ಯಗಳ ಪೂರ್ಣ ಪ್ರತಿಫಲ ನಮಗೆಯೇ ಲಭಿಸುತ್ತದೆ. ಅದರಿಂದ ಒಂದಿಂಚ್ಚು ಕಡಿಯೆಯಾಗುವುದಿಲ್ಲ. ಅವರಿಗೆ ಸಿಗುವ ಫಲ ಬೇರೆಯೇ ಆಗಿದೆ.

ಯಾರು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದರೂ ಹೋಗಿ. ಇಫ್ರಾರ್ ಗೆ ಹೋದ ಪುಣ್ಯ ಮತ್ತು ಅವರ ಇಫ್ತಾರ್ ಗೆ ಸಹಕರಿಸಿದ ಪುಣ್ಯಗಳು ನಿಮಗೆ ಲಭಿಸುತ್ತವೆ. ಅದರೊಂದಿಗೆ ಮಿತ್ರತ್ವ ಗಟ್ಟಿಗೊಳಿಸಿದ ಪುಣ್ಯವೂ ಲಭ್ಯ. ಹೀಗೆ ನಾವರಿಯದೆಯೇ ಹಲವಾರು ಒಳಿತುಗಳು ನಮ್ಮ ಖಾತೆಗೆ ಜಮಾ ವಾಗುತ್ತವೆ.

☪  *ಖುರ್ ಆನ್ ಪಾರಾಯಣ*

ಖುರ್ ಆನ್ ಅವತೀರ್ಣ ಗೊಂಡ ತಿಂಗಳಾಗಿದೆ ರಮಳಾನ್ ತಿಂಗಳು. ಪರಿಶುದ್ಧ ಖುರ್ ಆನ್ ಹೇಳುವುದು ನೋಡಿ.
👇👇👇👇👇

شَهْرُ رَمَضَان
🌳 *ರಮಾಳಾನ್ ತಿಂಗಳು*

الَّذِى اُنْزِلَ فِيهِ الْقُرْأَنُ

🌳 *(ಆ )ತಿಂಗಳಲ್ಲಿ ಖುರ್ ಆನ್ ಅವತೀರ್ಣಗೊಳಿಸಲಾಗಿದೆ.*

ಪರಿಶುದ್ಧ ವಾದ ರಂಝಾನ್ ತಿಂಗಳು ಖುರ್ ಆನ್ ಅವತೀರ್ಣಗೊಳ್ಳುವ ಮೂಲಕ ಧನ್ಯಗೊಂಡ ಮಾಸವಾಗಿದೆ. ಖುರ್ ಆನ್ ನ ವಾರ್ಷಿಕ ಎಂಬ ನಿಟ್ಟಿನಲ್ಲಿ ಈ ತಿಂಗಳಲ್ಲಿ ಯಥೇಚ್ಛವಾಗಿ ಖುರ್ ಆನ್ ಓದಬೇಕು.

ಇಮಾಮ್ ಶಾಫಿಈ ರಳಿಯಲ್ಲಾಹು ಅನ್ಹು ರವರು ರಮಳಾನ್ ತಿಂಗಳಲ್ಲಿ ಪ್ರತೀ ದಿನ ಎರಡು ಖತಮ್ ಮಾಡುತ್ತಿದ್ದರಂತೆ! ಶಾಫಿಈ ಇಮಾಮರ ಆ ಪದವಿಗೆ ತಲುಪಲು ನಮಗೆ ಸಾಧ್ಯವಿಲ್ಲ. ಆದರೆ , ರಮಳಾನ್ ತಿಂಗಳಲ್ಲಿ ಕನಿಷ್ಟ ಮೂರು ಖತಮುಲ್ ಖುರ್ಆನ್ ಮಾಡಲು ನಮಗೆ ಸಾಧ್ಯವಾಗಬೇಕು.

ಸುಬಹಿ ನಮಾಝ್ ಮೊದಲು ಮತ್ತು ನಂತರ ಒಂದು ಜುಝ್'ಅ್,ಳುಹ್ರ್ ಮೊದಲು‌ ಮತ್ತು ನಂತರ ಒಂದು ಜುಝ್'ಅ್,ಅಸರ್ ಮೊದಲು ಮತ್ತು ನಂತರ ಒಂದು ಜುಝ್'ಅ್ ಓದಿದರೆ ಒಂದು ದಿನದಲ್ಲಿ ಮೂರು ಜುಝ್'ಅ್ ಓದಬಹುದು‌. ಹತ್ತು ದಿನದಲ್ಲಿ ಒಂದು ಖತಮ್ ಪೂರ್ತಿಗೊಳಿಸಬಹುದು. ಹೀಗೆ ಪ್ರತ್ಯೇಕ ಸಮಯ ನಿಗದಿ ಪಡಿಸಿ ಓದುವಾಗ ಆಯಾಸವು ಅನುಭವ ಕ್ಕೆ ಬರಲಾರದು. ಅರ್ಧ ಜುಝ್'ಅ್ ಓದಲು ಕೇವಲ ಕಾಲು ಗಂಟೆ ಸಮಯ ಸಾಕು.

ಇತರ ದಿನಗಳಲ್ಲಿ ಖುರ್ ಆನ್ ಓದಲು ಸಮಯದ ಅಭಾವ ಹೇಳುವ ನಾವು ರಮಳಾನ್ ತಿಂಗಳಲ್ಲಿ ಅದೇ ಸಬೂಬು ಹೇಳಿ ಜಾರಿಕೊಂಡರೆ ಪರಲೋಕ ನಶ್ವರ ವಾಗಬಹುದು.

☪  *ಖುರ್ ಆನ್ ಓದಿದರೆ ಸಿಗುವ ಪ್ರತಿಫಲ*

ಖುರ್ ಆನ್ ಓದಿದರೆ ಅಪಾರವಾದ ಪುಣ್ಯ ವಿದೆ. ಖುರ್ ಆನ್ ನ ಒಂದಕ್ಷರಕ್ಕೆ ಹತ್ತರಷ್ಟು ಒಳಿತು ಲಭಿಸುವಾಗ ರಮಳಾನ್ ನಲ್ಲಿ ಓದಿದರೆ ಅದರ ದುಪ್ಪಟ್ಟು ಲಭಿಸುತ್ತದೆ. ಖುರ್ ಆನ್ ಓದಲು ತಿಳಿಯದವರು ಅದನ್ನು ನೋಡಿದರೆ ಸಾಕು ಪುಣ್ಯ ಕರಗತ ಮಾಡಬಹುದು.

ಖುರ್ ಆನ್ ಓದಿದರೆ ಸಿಗುವ ಪುಣ್ಯ ಗಳ ಕುರಿತು

*ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ:*

اِقْرَؤُوا
🌳 *ನೀವು ಓದಿರಿ.*

الْقُرْآنَ
🌳 *ಖುರ್ ಆನ್ ಅನ್ನು.*

فَإِنَّهُ
🌳 *ನಿಶ್ಚಿಯವಾಗಿಯೂ ಖುರ್ ಆನ್.*

يَأْتِي
🌳 *ಖುರ್ ಆನ್ ಬರುತ್ತದೆ.*

يَوْمَ الْقِيَامَةِ
🌳 *ಅಂತ್ಯ ದಿನದಲ್ಲಿ*

شَفِيعًا.
🌳 *ಶಿಫಾರಸ್ಸು ಮಾಡಲು*

لِاَصْحَابِهِ
🌳 *ಖುರ್ ಆನ್ ಓದುವವರಿಗೆ‌.*

رواه مسلم :ವರದಿ

ಮತ್ತೊಂದು ಹದೀಸ್ ಈ ರೀತಿ ಇದೆ : 👇👇👇👇👇

مَنْ
🌳 *ಒಬ್ಬನು.*

قَرَأَ
🌳 *ಓದಿದರೆ*

حَرْفًا
🌳 *ಒಂದಕ್ಷರ*

مِنْ كِتَابِ اللَّهِ
🌳 *ಅಲ್ಲಾಹನ ಖುರ್ ಆನ್ ನಿಂದ*

فَلَهُ
🌳 *ಅವನಿಗಿದೆ.*

حَسَنَةٌ
🌳 *ಪ್ರತಿಫಲ ವಿದೆ.*

وَالْحسَنَةُ بِعَشْرِ أَمْثَالِهَا
🌳 *ಒಂದು ಪುಣ್ಯಕ್ಕೆ ಹತ್ತು ಪಟ್ಟು ಒಳಿತಿದೆ*

لَا أًقُول الم حَرْفٌ
🌳 *ಅಲಿಫ್, ಲಾಮ್ ,ಮೀಮ್ ಒಂದಕ್ಷರ ಎಂದು ನಾನು ಹೇಳಲಾರೆ*

وَلَكِنْ
🌳 *ಆದರೆ*

اَلِفٌ حَرْف
🌳 *ಅಲಿಫ್ ಒಂದಕ್ಷರ*

وَلَامٌ حَرْفٌ
🌳 *ಲಾಮ್ ಇನ್ನೊಂದಕ್ಷರ*

ومِيمٌ حَرْفٌ
🌳 *ಮೀಮ್ ಮತ್ತೊಂದು ಅಕ್ಷರವಾಗಿದೆ.*

رواه الترمذي

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...