Skip to main content

ಸಲಪಿಯ ಬಿದ್ ಅತ್ ಮತ್ತೊಮ್ಮೆ ಹರಾಜಾದಾಗ...

ಖುರ್ ಆನ್ ಓದಬಹುದೇ..
➖➖➖➖➖➖➖➖
ಸಲಪಿಯ ಬಿದ್ ಅತ್  ಮತ್ತೊಮ್ಮೆ ಹರಾಜಾದಾಗ...
🌷🌷🌷🌷🌷🌷🌷🌷🌷🌷

✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*

🌷🌷🌷🌷🌷🌷🌷🌷🌷🌷

👉 ಸಲಪಿಯ ವಾದ ಪ್ರಕಾರ *ಖುರ್ ಆನ್ ಓದುವುದು* ಬಿದ್ ಅತ್ ಆಗಿದೆ.

ಸಲಪಿಯ ವಾದ ನೋಡಿರಿ.
👇👇👇👇👇
👉 *ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇಲ್ಲದ್ದು ಬಿದ್ ಅತ್. ಬಿದ್ ಅತ್ ಮಾಡುವವನು ನರಕಕ್ಕೆ.*

ಬಿದ್ ಅತ್ ಮಾಡುವಾತ ನರಕಕ್ಕೆ ಎಂದು ಹೇಳುವುದಾದರೆ ಖುರ್ ಆನ್ ಓದುವುದು ಬಿದ್ ಅತ್ ಮತ್ತು ಅದು ಓದಿದವನು ನರಕಕ್ಕೆ ಎಂದು ಸಲಪಿ ಒಪ್ಪಬೇಕು. *ಸಲಪಿಯ ವಾದ ಪ್ರಕಾರ ಖುರ್ ಆನ್ ಓದುವ ಸರ್ವ ಸಲಪಿ ಯೂ ಬಿದ್ ಅತ್ ಗಾರ ಮತ್ತು ಆತ ನರಕಕ್ಕೆ.*

👉 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಖುರ್ ಆನ್ ಗ್ರಂಥ ರೂಪದಲ್ಲಿ ಇರಲಿಲ್ಲ.

👉 ಖುರ್ ಆನ್ ಗ್ರಂಥ ರೂಪದಲ್ಲಿ ಜಾರಿಗೆ ತಂದವರು ಒಂದನೇ ಖಲೀಫಾ ಸಿದ್ದೀಖ್ ರಳಿಯಲ್ಲಾಹು ಅನ್ಹು.

👉 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಅಥವಾ ನಾಲ್ಕು ಖಲೀಫಾ ರ ಕಾಲದಲ್ಲಿ ಖುರ್ ಆನ್ ಗೆ *ಪತ್ಹ್,ಕಸ್ರ್, ಳಮ್, ಚುಕ್ಕೆ ಯಾವುದೂ ಇರಲಿಲ್ಲ.*

*ب ,ف ,ث, ض,  ق, غ ,ف, ت ن, ة, ز ,ظ, ي, ش ,ج, خ, ذ*

ಈ ಅಕ್ಷಗಳಲ್ಲಿ ಕಾಣುವ ಯಾವುದೂ  ಚುಕ್ಕೆ ಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇದ್ದಿಲ್ಲ.

ಖುರ್ ಆನ್ ಅಕ್ಷರಗಳು  ಚುಕ್ಕೆ ಮತ್ತು ಅರ್ಕತ್ ಇಲ್ಲದೆ ಈ ರೀತಿ ಯಲ್ಲಿ ಇದ್ದವು.

👇👇👇👇ಉದಾ:

ى اىس ىىىىه ماحد رحل ىىى

ಇದನ್ನು ಓದಲು ಅರಬಿಗಳಿಗಲ್ಲದೆ ಸಾಧ್ಯ ವಾಗುತ್ತಿರಲಿಲ್ಲ.

ಪದಗಳ ಪರಿಚಯ ಕ್ಕಾಗಿ ಅಲೀ ರಳಿಯಲ್ಲಾಹು ಅನ್ಹು ರವರ ಕಾಲದಲ್ಲಿ ಅಕ್ಷರ ಗಳ ಕೊನೆಯಲ್ಲಿ ಚುಕ್ಕೆ ಯನ್ನು ಸೇರಿಸುವ ಸಂಪ್ರದಾಯ ಜಾರಿಗೆ ತರಲಾಯಿತು. ಪದಗಳ ಪರಿಚಯಕ್ಕಾಗಿ ಪದದ ಕೊನೆಗೆ ಚುಕ್ಕೆ  ಹಾಕುವ ಮೂಲಕ *ಇಮಾಮ್ ಅಬುಲ್ ಅಸ್ವದಿದ್ದು ಅಲೀ ರಳಿಯಲ್ಲಾಹು ಅನ್ಹು*  ರವರು ಹೊಸ ಪರಿಷ್ಕರಣೆಗೆ ಮುನ್ನುಡಿ ಬರೆದರು. ಈ ಪರಿಷ್ಕರಣೆಗೆ ನುಖತು ಇಅ್ ರಾಬ್ ಎನ್ನುತ್ತಾರೆ.

ಕೊನೆಗೆ ಚುಕ್ಕೆ ಹಾಕಿಯೂ ಖುರ್ ಆನ್ ಓದಲು ಕಷ್ಟ ವಾದಾಗ ಹಜ್ಜಾಜ್ ಬಿನ್ ಯೂಸುಫ್ ರವರ ಕಾಲದಲ್ಲಿ (ಇವತ್ತು ಖುರ್ ಆನ್ ನ ಪದಗಳಲ್ಲಿ ಕಾಣುವಂತೆ ) ಬೇರೆ ಬೇರೆ ಅಕ್ಷರಗಳಿಗೆ ಚುಕ್ಕೆ ಯನ್ನು ಹಾಕಿ ಓದಲು ಸುಲಭಗೊಳ್ಳು ವಂತೆ ಮತ್ತೊಮ್ಮೆ ಖುರ್ ಆನ್ ಪರಿಷ್ಕರಿಸಿದರು.

*ಫಾ ಗೆ ಒಂದು ಚುಕ್ಕೆ ಖ್ವಾಫ್ ಗೆ ಎರಡು ಚುಕ್ಕೆ  ಹೀಗೆ...*

ಈ ಕಾರ್ಯ ನಿರ್ವಹಿಸಿದವರು *ಇಮಾಮ್ ಯಹ್ಯಬ್ನು ಯಅ್ ಮುರು (ರ) ಮತ್ತು ಇಮಾಮ್ ನಸ್ರುಬುನು ಆಸಿಮ್ (ರ)* ಎರಡನೇಯ ಈ ಪರಿಷ್ಕರಣೆಗೆ ನುಖತು ಇಅ್ ಜಾಂ ಎನ್ನಲಾಗುತ್ತದೆ.

ಇಂದು ಕಾಣುವ ರೀತಿಯ *ಪತ್ಹ್,ಕಸ್ರ್, ಳಮ್, ಸುಕೂನ್* ಹಾಕಿ ಅತ್ಯಂತ ಸುಲಭ ವಾಗಿ ಓದಲು ಸಹಕಾರಿ ಯಾಗುವಂತೆ ಖುರ್ ಆನ್ ಪರಿಷ್ಕರಿಸಿದವರು ಹಿಜ್ರಾ 100 ರಲ್ಲಿ ಜನಿಸಿ 174 ವಫಾತಾದ ಎರಡನೇ ಶತಮಾನದ *ಇಮಾಮ್ ಖಲೀಲು ಬುನು ಅಹ್ಮದಲ್ ಫರಾಹೀದೀ ರಳಿಯಲ್ಲಾಹು ಅನ್ಹು* ರವರಾಗಿದ್ದಾರೆ.ಈ ಪರಿಷ್ಕರಣೆಗೆ ಅತ್ತಶ್ ಕೀಲ್ ಎನ್ನುತ್ತಾರೆ‌.

👉 *ಉಮರ್ ರಳಿಯಲ್ಲಾಹು ಅನ್ಹು ಜಾರಿಗೆ ತಂದ ಇಪ್ಪತ್ತು ರಕಾ ಅತ್ ತರಾವೀಹ್ ಸಲಪಿಗೆ ಬಿದ್ ಅತ್.*
ಏಕೆಂದರೆ, ಅದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ.

👉 *ಉಸ್ಮಾನ್ ರಳಿಯಲ್ಲಾಹು ಅನ್ಹು ರವರು ಜಾರಿಗೆ ತಂದ ಜುಮಾ ಗೆ ಮೊದಲ ಬಾಂಗ್ ಸಲಪಿ ಗೆ ಬಿದ್ ಅತ್.* ಏಕೆಂದರೆ, ಅದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ.

👉 *ಅಹ್ಲುಸುನ್ನತ್ ವಲ್ ಜಮಾ ಅತ್ ಆಚರಿಸುವ ಆಚರಣೆ ಸಲಪಿಗೆ ಬಿದ್ ಅತ್*

ಸಲಪಿಯ ವಾದ ಪ್ರಕಾರ ಖುರ್ ಆನ್ ಓದುವುದೂ ಬಿದ್ ಅತ್ ಅಲ್ಲವೇ ? ಏಕೆಂದರೆ, ಇಂದು ಕಾಣುವ ರೀತಿಯಲ್ಲಿ ಮುಸ್ಹಫ್ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ.

ಸಲಪಿ ಖುರ್ ಆನ್ ಅನ್ನೂ ಬಿದ್ ಅತ್ ಎಂದು ಹೇಳುತಿದ್ದನೋ‌ ಏನೋ  ? ಹಾಗೆ ಹೇಳಿದರೆ ಸಲಪಿಗೆ ಖುರ್ ಆನ್ ಆಯತ್ ಓದಲು ಸಾಧ್ಯವೇ ? ಸುನ್ನಿಗಳನ್ನು ಕಾಫಿರ್ ಮಾಡಲು ಸಾಧ್ಯವೇ ? ಇನ್ನು ಖುರ್ ಅನ್ ಬಿದ್ ಅತ್ತೆಂದು ಹೇಳಿದರೆ ಸಮುದಾಯವು ಸಲಪಿಯನ್ನು ಶಾಶ್ವತ ವಾಗಿ ಇತಿಹಾಸ ಪುಟಕ್ಕೆ ಸೇರಿಸುತ್ತಿತ್ತು.

ಗೂಗಲ್ ನೋಡಿ, ಯಾರೋ ಬರೆದ ಪರಿಭಾಷೆ ನೋಡಿ ದೀನ್ ಕಲಿತು ಶಿರ್ಕ್, ಪಿರ್ಕಿ, ಬಿದ್ ಅತ್ ಎಂದು ಹೇಳಿದರೆ ಈ ರೀತಿ ತಿರುಗುಬಾಣ ವಾಗುತ್ತದೆ.

ಇಮಾಮ್ ಗಳು ಪರಿಷ್ಕರಣೆ ಮಾಡಿದ ಖುರ್ ಆನ್ ಸಲಫಿ ಗೆ ಓದಬಹುದಾದರೆ, ಇಮಾಮರುಗಳು ರಚಿಸಿದ ಮೌಲಿದ್ ,ಮಾಲೆ, ಹದ್ದಾದ್ ತರಾವೀಹ್, ಜುಮಾ ಬಾಂಗ್ ಸುನ್ನಿಗಳಿಗೂ ಆಚರಿಸಲು ಯಾವುದೇ ಅಡ್ಡಿಯಿಲ್ಲ.

🌹🌹🌹🌹🌹🌹🌹🌹🌹

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...