Skip to main content

ತಾಯಂದಿರ ದಿನದ ಶುಭಾಶಯಗಳು

ತಾಯಂದಿರ ದಿನದ ಶುಭಾಶಯಗಳು

ಪರಿಶುದ್ಧ ಖುರ್ ಆನ್ ನಲ್ಲಿ ಅಲ್ಲಾಹನು ಮಾತಾಪಿತರನ್ನು ಗೌರವಿಸಬೇಕು, ಮಾತಾಪಿತರೊಂದಿಗೆ ಪ್ರೀತಿಯಿಂದ  ಹಾಗೂ ಉತ್ತಮ ರೀತಿಯಲ್ಲಿ ನಡೆದು ಕೊಳ್ಳಬೇಕು ಅವರೊಂದಿಗೆ "*ಛೇ*" ಎಂಬ ಮಾತನ್ನೂ ಕೂಡಾ ಹೇಳಕೂಡದು ಎಂಬಿತ್ಯಾದಿ ವಿಚಾರಗಳು ಖುರ್ ಆನ್ ನಲ್ಲಿ ಕಾಣಬಹುದು.

*ತಾಯಿ ಒಬ್ಬಳು ಹೆಣ್ಣು ಆ ಹೆಣ್ಣಿಗೆ ಇಸ್ಲಾಮ್ ಮಹತ್ತರ ವಾದ ಸ್ಥಾನ ನೀಡಿದೆ ಒಂದು ಹದೀಸ್ ನಲ್ಲಿ ಹೀಗೆ ಕಾಣಬಹುದು:*

حديث أبي هريرة  قال: جاء رجل إلى رسول الله ﷺ فقال: يا رسول الله، من أحق الناس بحسن صحابتي؟ -يعني: صحبتي، قال: أمك قال: ثم من؟ قال: أمك، قال: ثم من؟ قال:أمك، قال: ثم من؟ قال: أبوك[1]. متفق عليه.
ಅಬೂ ಹುರೈರಾ ರಳಿಯಲ್ಲಾಹು ಅನ್ಹುರವರಿಂದ ನಿವೇದನೆ: ಒಬ್ಬರು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ಬಂದರು. ಅವರು ಕೇಳಿದರು: *ಯಾ ರಸೂಲಲ್ಲಾ , ಜನರ ಪೈಕಿ ನನ್ನ ಸದ್ವರ್ಥನೆ ಅತೀ ಹೆಚ್ಚು ಅರ್ಹರು ಯಾರು.?* ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರವಿಟ್ಟರು: *ನಿನ್ನ ತಾಯಿ. ನಂತರ ಯಾರು.?ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು : ನಿನ್ನ ತಾಯಿ. ನಂತರ ಯಾರು.? ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: ನಿನ್ನ ತಾಯಿ.* ನಂತರ ಯಾರು.? ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: ನಿನ್ನ ತಂದೆ. (ಹದೀಸ್)

وفي رواية: يا رسول الله، من أحق بحسن الصحبة؟، قال: أمك، ثم أمك، ثم أمك، ثم أباك، ثم أدناك أدناك.
*ಬೇರೊಂದು ನಿವೇದನೆ ಹೀಗಿದೆ:*
ಯಾ ರಸೂಲಲ್ಲಾ , ಜನರ ಪೈಕಿ ನನ್ನ ಸದ್ವರ್ತನೆ ಹೆಚ್ಚು ಅರ್ಹರು ಯಾರು.? ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರವಿಟ್ಟರು: *ನಿನ್ನ ತಾಯಿ, ನಂತರ ನಿನ್ನ ತಾಯಿ, ನಂತರ ನಿನ್ನ ತಾಯಿ,* ನಂತರ ನಿನ್ನ ತಂದೆ, ನಂತರ ಅವರೊಂದಿಗೆ ಹತ್ತಿರವಾದವರೂ ಹತ್ತಿರವಾದವರೂ.* (ಹದೀಸ್)

*ಸತ್ಕಾರ್ಮಗಳಲ್ಲೂ ಮೇಲು ಗೈ ಮಾತಾಪಿತರಿಗೆ ಮಾಡುವ ಉಪಕಾರ*

حديث أبي عبد الرحمن عبد الله بن مسعود قال: سألت النبي ﷺ أي العمل أحب إلى الله تعالى؟ قال: الصلاة على وقتها، وقال: قلت: ثم أي؟ قال: بر الوالدين، قلت: ثم أي؟ قال: الجهاد في سبيل الله[1]. متفق عليه.
ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ನಾನು ಕೇಳಿದೆನು: *ಅಲ್ಲಾಹನ ಬಳಿ ಇಷ್ಟ ವಾದ ಸತ್ಕಾರ್ಮ ಯಾವುದು.?* ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರವಿಟ್ಟರು: ಸಮಯಕ್ಕೆ ಸರಿಯಾಗಿ ನಮಾಝ್ ನಿರ್ವಹಿಸುವುದು, ನಂತರ ಯಾವುದು: ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರವಿಟ್ಟರು: *ಮಾತ ಪಿತರಿಗೆ ಉಪಕಾರ ಮಾಡೋದು.* ನಂತರ ಯಾವುದು: ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರವಿಟ್ಟರು: ಅಲ್ಲಾಹನ ಮಾರ್ಗದಲ್ಲಿ ಸ್ವ ಶರೀರವನ್ನು ಹಿಡಿದಿಡುವುದು (ಉದ್ಧೇಶ : ಜಿಹಾದ್).

*ಇವರಿಗೆ ಸ್ವರ್ಗ ವಿಲ್ಲ*

قال صلى الله عليه وسلم"لا يدخل الجنة عاقّ"
ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: *"ಮಾತಾಪಿತರನ್ನು ಉಪದ್ರವಿಸಿದವನು ಸ್ವರ್ಗ ಪ್ರವೇಶಿಸಲಾರ."* (ಹದೀಸ್)

*ಪರಸ್ಪರ ಕೆಸರೆರಚಾಟವು ದೊಡ್ಡ ಪಾಪಗಳಲ್ಲಿ ಏಣಿಸಲಲ್ಪಟ್ಟದ್ದು*

عَنْ عَبْدِ اللَّهِ بْنِ عَمْرٍو رضي الله عنه قَالَ: قَالَ رَسُولُ اللَّهِ صلى الله عليه وسلم: «إِنَّ مِنْ أَكْبَرِ الْكَبَائِرِ أَنْ يَلْعَنَ الرَّجُلُ وَالِدَيْهِ». قِيلَ يَا رَسُولَ اللَّهِ وَكَيْفَ يَلْعَنُ الرَّجُلُ وَالِدَيْهِ قَالَ: «يَسُبُّ الرَّجُلُ أَبَا الرَّجُلِ، فَيَسُبُّ أَبَاهُ، وَيَسُبُّ أَمَّهُ»
ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ: *"ದೊಡ್ಡ ಪಾಪಗಳಲ್ಲಿ ಒಳಗೊಂಡದ್ದಾಗಿದೆ ಒಬ್ಬ ಅವನ ಮಾತಾಪಿತರನ್ನು ಶಪಿಸುವುದು.* ಕೇಳಲ್ಪಟ್ಟಿತು ಹೇಗೆ ಯಾ ರಸೂಲಲ್ಲಾ ಸ್ವಂತ ಮಾತಾಪಿತರನ್ನು ಶಪಿಸುವುದು. ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: *ಒಬ್ಬಾತ ಮತ್ತೊಬ್ಬನ ಮಾತಾಪಿತರನ್ನು ಆಕ್ಷೇಪಿಸುವನು ಆತ ಈತನ ಮಾತಾಪಿತರನ್ನು ಆಕ್ಷೇಪಿಸುವನು.* (ಪರಸ್ಪರ ಅಕ್ಷೇಪಿಸುವುದು). (ಹದೀಸ್)

*Face Book Like Page*
https://www.facebook.com/ಅಹ್ಲು-ಸುನ್ನತಿ-ವಲ್-ಜಮಾಅ-1032565733616311/?referrer=whatsapp
✒ *ನಿಸಾರ್ ಸಖಾಫಿ ಉಳ್ಳಾಲ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...