______________________________
ನಮಗೆ ಆಈಶಾ ಬೀವಿ ಮಾದರಿಯಾಗಲಿ
➖➖➖➖➖➖➖➖➖➖
ಆಈಶಾ ಬೀವಿಯವರು ಜಮಲ್ ಯುದ್ಧ ದಲ್ಲಿ ಭಾಗವಹಿಸಿದ್ದರೇ
🌷🌷🌷🌷🌷🌷🌷🌷🌷🌷
✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*
🌷🌷🌷🌷🌷🌷🌷🌷🌷🌷
ಆಈಶಾ ಬೀವಿ ರಳಿಯಲ್ಲಾಹು ಅನ್ಹ ರವರು ಜಮಲ್ ಯುದ್ಧ ದಲ್ಲಿ ಭಾಗವಹಿಸಿದ್ದಾರೆ ಆ ಕಾರಣಕ್ಕಾಗಿ ನಾವು ಪ್ರತಿಭಟನೆ ಗಳಲ್ಲಿ , ಜಾಥಾಗಳಲ್ಲಿ ಭಾಗವಹಿಸುತ್ತಿದ್ದೇವೆಂದು ಕೆಲವು ಮಹಿಳಾ ಮಣಿಗಳು ಹೇಳುತ್ತಿದ್ದಾರಂತೆ!! *ನವೂದ್ಸು ಬಿಲ್ಲಾಹ್!* ಇವರ ಅನಿಸ್ಲಾಮಿಕ ವರ್ತನೆಗೆ ಆಈಶಾ ರಳಿಯಲ್ಲಾಹು ಅನ್ಹ ರವರನ್ನು ಎಳೆದು ತರುವುದು ನೋಡುವಾಗ ದು:ಖ ವಾಗುತ್ತಿದೆ. ಕೆಲವು ಮುಸ್ಲಿಂ ಮಹಿಳೆಯರು ಇಷ್ಟೊಂದು ಅದ:ಪತನಕ್ಕೆ ಇಳಿದು ಹೋದರಲ್ಲವೇ ಎಂದು ಖೇದವಾಗುತ್ತಿದೆ.
ಉಸ್ಮಾನ್ ರಳಿಯಲ್ಲಾಹು ಅನ್ಹು ರವರನ್ನು ವಧಿಸಿದ ಬಳಿಕ ಅಪರಾಧಿ ಗಳನ್ನು ಹಿಡಿಯುವಲ್ಲಿ ಅಲೀ ರಳಿಯಲ್ಲಾಹು ಅನ್ಹು ರವರು ಆತುರ ತೋರಲಿಲ್ಲ ಎಂಬ ಕೂಗು ಮುಸ್ಲಿಂ ವಲಯದಲ್ಲಿ ಕೇಳಿ ಬರುತ್ತಿತ್ತು. ಕೆಲವರು ಈ ಬಗ್ಗೆ ಅಲೀ ರಳಿಯಲ್ಲಾಹು ಅನ್ಹು ರವರೊಂದಿಗೆ ಅತೃಪ್ತಿ ಯನ್ನೂ ಹೊಂದಿದ್ದರು.ಅಲೀ ರಳಿಯಲ್ಲಾಹು ಅನ್ಹು ರವರೊಂದಿಗೆ ಅತೃಪ್ತಿ ಹೊಂದಿದವರಲ್ಲಿ ಪ್ರಮುಖ ರಾಗಿದ್ದವರು ಮುಆವಿಯಾ ರಳಿಯಲ್ಲಾಹು ಅನ್ಹು.
ಈ ಸಂದರ್ಭದಲ್ಲಾಗಿತ್ತು ಆಈಶಾ ರಳಿಯಲ್ಲಾಹು ಅನ್ಹ ರವರು ಹಜ್ ಮುಗಿಸಿ ಮಕ್ಕಾ ದಿಂದ ಬಶ್ವರಾ ದತ್ತ ದೊಡ್ಡ ಜನ ಸಮೂಹ ದೊಂದಿಗೆ ಹೊರಟರು. ಉಸ್ಮಾನ್ ರಳಿಯಲ್ಲಾಹು ರವರನ್ನು ವಧಿಸಿದ ಅಪರಾಧಿಗಳ ವಿರುದ್ಧ ಸಹಾಯಾಚನೆಯಾಗಿತ್ತು ಯಾತ್ರೆಯ ಉದ್ದೇಶ ಎಂಬ ವಾರ್ತೆ ಯೂ ಹಬ್ಬಿತು. ಈ ವಾರ್ತೆ ಕೇಳಿದ ಅಲೀ ರಳಿಯಲ್ಲಾಹು ಅನ್ಹು ರವರು ಅನುಯಾಯಿಗಳೊಂದಿಗೆ ಬಶ್ವರಾ ದತ್ತ ಹೊರಟರು.
ಉಸ್ಮಾನ್ ರಳಿಯಲ್ಲಾಹು ಅನ್ಹು ರವರನ್ನು ವಧಿಸಿದರನ್ನು ಬಂಧಿಸುವುದು ಮತ್ತು ಮುಸ್ಲಿಮರ ನಡುವೆ ಉಂಟಾದ ಗೊಂದಲ ಬಗೆ ಹರಿಸುವುದು ಎಂಬ ವಿಷಯದಲ್ಲಿ ಒಪ್ಪಂದ ಮಾಡಲು ಅಲೀ ರಳಿಯಲ್ಲಾಹು ಅನ್ಹು ರವರು ಆಈಶಾ ರಳಿಯಲ್ಲಾಹು ಅನ್ಹ ರವರ ಬಳಿ ಪ್ರತಿನಿಧಿ ಯನ್ನು ಕಳಿಸಿದರು. ಅದಕ್ಕೆ ಆಈಶಾ ರಳಿಯಲ್ಲಾಹು ಅನ್ಹ ರವರು ಒಪ್ಪಿಗೆಯನ್ನೂ ನೀಡಿದರು.
ಈ ವಿಷಯ ತಿಳಿದ ಸಬಯಿಯ್ಯ ವಿಭಾಗ ಈ ಒಪ್ಪಂದವು ಜಾರಿಯಾಗಬಾರದೆಂದು, ಜಾರಿಯಾದರೆ ಉಸ್ಮಾನ್ ರಳಿಯಲ್ಲಾಹು ಅನ್ಹು ರವರ ಕೊಲೆಗೆ ಕಾರಣ ರಾದ ಸಬಯಿಯ್ಯ ವಿಭಾಗದೊಂದಿಗೆ ಪ್ರತಿಕಾರ ತೀರಿಸಲಾಗುತ್ತದೆ ಎಂದು ಮನಗಂಡು ಅಲೀ ರಳಿಯಲ್ಲಾಹು ಅನ್ಹ ರವರ ಅನುಯಾಯಿಗಳೊಂದಿಗೆ ಕುತಂತ್ರದಿಂದ ಸೇರಿಕೊಂಡು ರಾತ್ರಿ ಸಮಯ ಬಶ್ವರಾ ದವರೊಂದಿಗೆ ಯುದ್ಧ ಮಾಡಿದರು. ಅಲೀ ರಳಿಯಲ್ಲಾಹು ಅನ್ಹುರವರ ಅನುಯಾಯಿಗಳು ಯುದ್ಧ ಮಾಡಿದರೆಂದು ತಪ್ಪು ಕಲ್ಪನೆ ಗೊಳಗಾದ ಅವರು ಪ್ರತಿದಾಳಿ ನಡೆಸಿದರು.
ಆಈಶಾ ರಳಿಯಲ್ಲಾಹು ಅನ್ಹ ರವರು ಬಶ್ವರಾಗೆ ಬಂದದ್ದು ಉಸ್ಮಾನ್ ರಳಿಯಲ್ಲಾಹು ಅನ್ಹ ರವರ ಕೊಲೆಗೆ ಪರಿಹಾರ ಕೇಳಲು ಮಾತ್ರವಾಗಿತ್ತು. ಆದರೆ, ಯುದ್ಧ ವು ಆಕಸ್ಮಿಕ ವಾಗಿ ಉಂಟಾಯಿತು. ಅದು ಆಈಶಾ ರಳಿಯಲ್ಲಾಹು ಅನ್ಹ ರವರ ಉದ್ದೇಶ ವಾಗಿರಲಿಲ್ಲ. ಸಬಯ್ಯಿಯಾ ವಿಭಾಗದ ಕುತಂತ್ರದ ಫಲವಾಗಿತ್ತದು. *ಆಈಶಾ ರಳಿಯಲ್ಲಾಹು ಅನ್ಹ ರವರು ಪರಿಪೂರ್ಣ ಪರ್ಧಾ ಧರಿಸಿ ಸಂಪೂರ್ಣ ವಾಗಿ ಶರೀರ ಮರೆಮಾಚಿ ಯಾರಿಗೂ ಕಾಣದೆ ಪಲ್ಲಕಿ ಯಲ್ಲಾಗಿತ್ತು ಯಾತ್ರೆ ಮಾಡಿದ್ದು.*
ಪರಿಪೂರ್ಣ ಶರೀರ ಮರೆಮಾಚಿ ಪಲ್ಲಕಿಯಲ್ಲಿ ಯಾತ್ರೆ ಮಾಡಿದ್ದರೂ ಅವರಿಗೆ ಯಾತ್ರೆ ನಡೆಸಿದ ಬಗ್ಗೆ ಅತೀವ ದು:ಖ ವಿತ್ತು. ಬಶ್ವರಾಗೆ ಹೋದದ್ದು ತಪ್ಪೆಂಬ ಖೇದವಿತ್ತು.
ಸೂರ ಅಹ್ಝಾಬಿನ *"ಜಾಹಿಲಿಯಾದ ಕಾಲದಲ್ಲಿ ನಡೆದಂತೆ ನಡೆಯದೆ ನೀವು ನಿಮ್ಮ ಮನೆಯಲ್ಲಿ ಅಡಗಿ ಕುಳಿತು ಕೊಳ್ಳಿರಿ"* ಎಂಬ 33 ನೇ ಆಯತ್ ಓದುವಾಗ ಅತ್ತು ಬಿಡುತ್ತಿದ್ದರು.
ತಾನು ಬಶ್ವರಾ ಗೆ ಹೋದದ್ದು ಒಳಿತಿಗಾಗಿದ್ದರೂ ಅದು ಸರಿಯಲ್ಲ ಎಂಬ ಭಾವನೆ ಯಿಂದ ಮರಣ ತನಕ ಖುರ್ ಆನ್ ನ ಆಯತ್ ಓದುವಾಗ ಆ ಬಗ್ಗೆ ಖೇದ ಪಟ್ಟು ಅಳುತ್ತಿದ್ದರು. ಅಂತಹ ಆಈಶಾ ರಳಿಯಲ್ಲಾಹು ಅನ್ಹ ರವರು ಯುದ್ಧ ಕ್ಕೋಗಿದ್ದಾರೆಂದು ಅವರ ಮೇಲೆ ಸುಳ್ಳಾರೋಪ ಮಾಡಿ, ಶರೀರದ ಅಂಗಗಳನ್ನು ಮರೆಮಾಚದೆ ಪ್ರತಿಭಟನೆ ರಾಲಿಯಲ್ಲಿ ಭಾಗವಹಿಸುವ ಮಹಿಳೆಯರೇ ನಿಮಗೆ ಅಲ್ಲಾಹನ ಭಯ ಇಲ್ಲವೇ ?
ಪರಿಪೂರ್ಣ ಪರ್ಧಾ ಧರಿಸಿದ ಆಈಶಾ ರಳಿಯಲ್ಲಾಹು ಅನ್ಹ ರವರ ಆದರ್ಶ ಎಲ್ಲಿ ? ಅವರ ಹೆಸರಲ್ಲಿ ಅರೆ ನಗ್ನ ರಾಗಿ , ಶಾಲು ಪರ್ಧಾ ಧರಿಸಿ ಜಾಥ ಹೋಗುವ ನೀವೆಲ್ಲಿ ?
*ಪ್ರೀತಿಯ ಸಹೋದರಿಯರೇ, ನಿಮ್ಮನ್ನು ರಂಗ ಪ್ರವೇಶ ಮಾಡಿಸಲು ಆಈಶಾ ರಳಿಯಲ್ಲಾಹು ಅನ್ಹ ರವರ ಚರಿತ್ರೆ ಯನ್ನು ದುರ್ವ್ಯಾಖ್ಯಾನಿಸಿ ಕರೆತರುವವರು ನಿಮ್ಮ ಪರಲೋಕ ನಷ್ಟ ಪಡಿಸುತ್ತಿದ್ದಾರೆಂಬುದನ್ನು ಮರೆಯಬೇಡಿರಿ. ಕ್ಯಾಂಪಸ್ ಹೆಸರಲ್ಲಿ, ಸಂಘಟನೆಯ ಹೆಸರಲ್ಲಿ ಬೀದಿ ಬದಿ ಲಜ್ಜೆ ರಹಿತಳಾಗಿ ಇರಬೇಕಾದವಳಲ್ಲ ಮಹಿಳೆ. ಅವಳು ಆಈಶಾ ರಳಿಯಲ್ಲಾಹು ಅನ್ಹ ರವರ ಆದರ್ಶ ಪಾಲಿಸಬೇಕಾದವಳು.*
🎋🎋🎋🎋🎋🎋🎋🎋🎋🎋
Comments