Skip to main content

ಭಾರತದ ಸ್ವಾತಂತ್ರ್ಯ ಮುಸ್ಲಿಂ ಹೋರಾಟಗಾರರಲ್ಲಿ ಪ್ರಮುಖರಾದ ಕೆಲವು ಪಂಡಿತರುಗಳು

ಭಾರತದ ಸ್ವಾತಂತ್ರ್ಯ ಮುಸ್ಲಿಂ ಹೋರಾಟಗಾರರಲ್ಲಿ ಪ್ರಮುಖರಾದ ಕೆಲವು ಪಂಡಿತರುಗಳು


🇮🇳🇮🇳🇮🇳🇮🇳🇮🇳🇮🇳🇮🇳🇮🇳
✍ ಗಫೂರ್ ಬಾಯಾರ್
➖➖➖➖➖➖➖➖
1. ನವಾಬ್ ಸಿರಾಜುದೌಲ.

2. ಶಹೀದ್ ಟಿಪ್ಪು ಸುಲ್ತಾನ್.

3. ಹಝ್ರತ್ತ್ ಷಾ ವಲಿಯುಲ್ಲಾಹಿ ಮುಹದ್ದೀಸ್ ದಹ್ಲವಿ.

4. ಹಝ್ರತ್ತ್  ಷಾ ಅಬ್ದುಲ್ ಅಝೀಝ್ ಮುಹದ್ದೀಸ್ ದಹ್ಲವಿ.

5. ಹಝ್ರತ್ತ್ ಸಯ್ಯದ್ ಅಹಮ್ಮದ್ ಶಹೀದ್.

6. ಹಝ್ರತ್ತ್ ಮೌಲಾನ ವಿಲಾಯತ್ತ್ ಅಲಿ ಸಾದಿಕ್ ಪುರಿ.

7. ಅಬೂ ಸಫರ್ ಸಿರಾಜುದ್ದೀನ್ ಮುಹಮ್ಮದ್ ಬಹ್ದೂರ್ ಷಾ ಸಫರ್.

8. ಅಲ್ಲಾಮ ಫಸಲ್ ಹಖ್ ಖೈರಾಬಾದಿ.

9. ಶೆಹ್ಸಾದ್ ಫಿರೋಝ್ ಷಾ.

10. ಮೌಲವಿ ಮುಹಮ್ಮದ್ ಬಖರ್ ಶಹೀದ್.

11. ಬೇಗಂ ಹಝ್ರತ್ತ್ ಮಹಲ್.

12. ಮೌಲಾನ ಅಹ್ಮದುಲ್ಲಾಹಿ ಷಾ.

13. ನವಾಬ್ ಬಹ್ದೂರ್ ಖಾನ್.

14. ಅಝೀಝಾನ್ ಭಾಹಿ.

15. ಷಾ ಅಬ್ದುಲ್ ಖಾದಿರ್ ಲುದಿಯಾನವಿ.

16. ಹಝ್ರತ್ತ್ ಹಾಜಿ ಇಂದಾದುಲ್ಲಾಹ್ ಮುಹಾಜಿರುಲ್ ಮಕ್ಕಿಯ್ಯಿ.

17. ಹಝ್ರತ್ತ್ ಮೌಲಾನ ಮುಹಮ್ಮದ್ ಖ್ವಾಸಿಂ ನದ್ವಿ.

18. ಹಝ್ರತ್ತ್ ಮೌಲಾನ ರಹ್ಮತ್ತುಲ್ಲಾಹ್ ಖೈರ್ ನವಿ.

19. ಶೈಖುಲ್ ಹಿಂದ್ ಹಝ್ರತ್ತ್ ಮೌಲಾನ ಮಹ್ಮೂದುಲ್ ಹಸ್ಸನ್.

20. ಹಝ್ರತ್ತ್ ಮೌಲಾನ ಉಬೈದುಲ್ಲಾಹ್ ಸಿಂದಿ.

21. ಹಝ್ರತ್ತ್ ಮೌಲಾನ ರಶೀದ್ ಅಹ್ಮದ್ ಗಂಗೋಯಿ.

22. ಹಝ್ರತ್ತ್ ಮೌಲಾನ ಅನ್ವರ್ ಷಾ ಕಾಶ್ಮೀರಿ.

23. ಮೌಲಾನ ಬರ್ಕತ್ತುಲ್ಲಾಹ್ ಧೋಪ್ಪಾಲಿ.

24. ಹಝ್ರತ್ತ್ ಮೌಲಾನ ಮುಫ್ತಿ ಖಿಫಾಯತ್ತುಲ್ಲಾಹ್.

25. ಶಾಹ್ಬಾನುಲ್ ಹಿಂದ್ ಮೌಲಾನ ಅಹ್ಮದ್ ಸಈದ್ ದಹ್ಲವಿ.

26. ಹಝ್ರತ್ತ್ ಮೌಲಾನ ಸಯ್ಯದ್ ಹುಸೈನ್ ಅಹ್ಮದ್ ಮದನಿ.

27. ಸಯ್ಯಿದುಲ್ ಅಹ್ರಾರ್ ಮೌಲಾನ ಮುಹಮ್ಮದ್ ಅಲಿ ಜಾಉಹರ್.

28. ಮೌಲಾನ ಹಝ್ರತ್ತ್ ಮೊಹಾನಿ.

29. ಮೌಲಾನ ಆರಿಫ್ ಹಿಸ್ವಿ.

30. ಮೌಲಾನ ಅಬ್ದುಲ್ ಕಲಾಂ ಅಝಾದ್.

31. ರಈಸುಲ್ ಅಹ್ರಾರ್ ಮೌಲಾನ ಹಬೀಬುಲ್ ರಹ್ಮಾನ್ ಲುದಿಯಾನವಿ.

32. Dr. ಸೈಫುದ್ದೀನ್ ಕ್ವಚ್ಚುಲು ಅಮೃತ್ಸರಿ.

33. ಮಾಸಿಹುಲ್ ಮುಲ್ಕ್ ಹಕೀಮ್ ಅಜ್ಮಲ್ ಖಾನ್.

34. ಮೌಲಾನ ಮಸ್ಹರುಲ್ ಹಖ್.

35. ಮೌಲಾನ ಸಫರ್ ಅಲಿ ಖಾನ್.

36. ಅಲ್ಲ ಇನಾಯತ್ತುಲ್ಲಾಹ್ ಖಾನ್ ಮಶ್ರಿಖ್.

37. Dr. ಮುಕ್ತಾರ್ ಅಹ್ಮದ್ ಅನ್ಸಾರಿ.

38. ಜನರಲ್ ಶಾನವಾಸ್ ಖಾನ್.

39. ಹಝ್ರತ್ತ್ ಮೌಲಾನ ಸಯ್ಯದ್ ಮುಹಮ್ಮದ್ ಮಿಯಾನ್.

40. ಮೌಲಾನ ಮುಹಮ್ಮದ್ ಹಿಫ್ ಸ್ಸೂರ್ ರಹ್ಮಾನ್ ಸೊಯ್ಯಹರ್ವಿ.

41. ಹಝ್ರತ್ ಮೌಲಾನ ಅಬ್ದುಲ್ ಬಾರಿ.

42. ಖಾನ್ ಅಬ್ದುಲ್ ಗಫ್ಫಾರ್ ಖಾನ್.

43. ಮುಫ್ತಿ ಅತ್ವಿಖೂರ್ ರಹ್ಮಾನ್ ಉಸ್ಮಾನಿ.

44. Dr. ಸಯ್ಯಿದ್ ಮಹ್ಮೂದ್.

45. ಅಬ್ದುಲ್ ಸಮದ್ ಖಾನ್.

46. ರಾಫಿ ಅಹ್ಮದ್ ಖ್ವಿದ್ವಿವಿ.

47. ಯೂಸುಫ್ ಮೆಹ್ರ್ ಅಲಿ.

48. ಆಶ್ಫಾಖುಲ್ಲಾಹ್ ಖಾನ್.

49. ಬಾರಿಸ್ಟರ್ ಆಸೀಫ್ ಅಲಿ.

50. ಹಝ್ರತ್ತ್ ಮೌಲಾನ ಅತಾಉಲ್ಲಾಹ್ ಷಾ ಬುಖಾರಿ.

51. ಮೌಲಾನ ಖಲೀಲುಲ್ ರಹ್ಮಾನ್ ಲುದಿಯಾನವಿ.

52. ಅಬ್ದುಲ್ ಖಯ್ಯುಮ್ ಅನ್ಸಾರಿ.

53. ಮೌಲಾನ ಮುಹಮ್ಮದಲಿ ಜೌಹರ್.

54. ಮೌಲಾನ ಶೌಕತ್ತಲಿ ಜೌಹರ್.

☪ಪ್ರಸ್ತುತ ಮುಸ್ಲಿಂಗಳೆಲ್ಲರೂ ಪಾಂಡಿತ್ಯವುಳ್ಳವರೂ, ಉತ್ತರ ಭಾರತದಲ್ಲಿ ಗಾಂಧೀಜಿಯ ಮೊದಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂಗಳೊಂದಿಗೂ,
ಅನ್ಯ ಧರ್ಮ ವಿಭಾಗದವರೊಂದಿಗೂ ಸಮರ ರಂಗಕ್ಕೆ ಧುಮುಕಲು ಆಹ್ವಾನ ಕೊಟ್ಟು, ಅವರೊಂದಿಗೆ ಸೇರಿ ಬ್ರಿಟಿಷ್ ಗಾರರೊಂದಿಗೆ ಹೋರಾಡಿ ವೀರ ಮರಣ ಹೊಂದಿದವರಾಗಿದ್ದಾರೆ.

ಅದೇ ಸಂದರ್ಭದಲ್ಲಿ ಇತ್ತ ಕೇರಳದಲ್ಲಿಯೂ ಮಂಬುರಮ್ ಸಯ್ಯಿದ್ ಅಲವಿ ತಂಙಳರವರ (ರ) ನೇತೃತ್ವದಲ್ಲಿ ಕುಂಞಾಲಿ ಮರಕಾರ್ (ರ)
 (ಒಂದನೇಯವರು,
 ಎರಡನೆಯವರು,
 ಮೂರನೆಯವರು)
ಅಲಿ ಮುಸ್ಲಿಯಾರ್ (ರ)
 ಅಬ್ದುಲ್ ಖಾದರ್ ಅತ್ತನ್ (ರ)
ಗುರುಕಲ್ ಚೆಮ್ಬಾನ್ ಪೊಕರ್ (ರ)
ಮೊದಲಾದ ಹಲವಾರು  ಮುಸ್ಲಿಂಗಳು ಹಿಂದುಳಿದ ದಲಿತ ವಿಭಾಗದರೊಂದಿಗೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಬಲಿ ಅರ್ಪಿಸಿದವರಾಗಿದ್ದಾರೆ.
ಇಂದಿನ ಮುಸ್ಲಿಂಗಳ ಪೂರ್ವಿಕರು.

ಆದರೆ ಆ ಸ್ವಾತಂತ್ರ್ಯ ಸಮರ ನಡೆಯುವ ವೇಳೆಯಲ್ಲಿ ವಂಚನೆ ಮಾಡಿದವರು, ಚೀನ ಗೂಡತಂತ್ರರು ಎಂದು ಅರಿಯಲ್ಪಟವರು,  ಹಾಗೂ ಆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು,  ಇಂದು ಕಪಟ ದೇಶ ಪ್ರೇಮದ ನಾಟಕವಾಡುತ್ತಾ,  ನಿರಪರಾಧಿಗಳಾದ ಮುಸ್ಲಿಮರನ್ನು, ಮುಸ್ಲಿಂ ಪಂಡಿತರನ್ನು ಭಯೋತ್ಪಾದಕರು, ಉಗ್ರವಾದಿಗಳೆಂದು ಮುದ್ರೆ ಒತ್ತಿ ಜೈಲುಗಳೊಳಗೆ ಹಾಕಲು ಪ್ರಯತ್ನಿಸುತ್ತಾರೆ.

 ಪರಂಪರಾಗತ ಮುಸ್ಲಿಂ ವಿಶ್ವಾಸಗಳಿಂದ ಬೇರ್ಪಟ್ಟು ವರ್ತಮಾನ ಕಾಲದ ಮುಸ್ಲಿಂ ಸಮುದಾಯಗಳಲ್ಲಿ ಭಿನ್ನತೆ ಉಂಟಾಗಿ ಹಲವು ಪಂಗಡಗಳಾಗಿರುವುದು ಹಾಗೂ ಈ ಪರಸ್ಪರ ಭಿನ್ನತೆಗಳ ಕಾರಣ ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಸಮರದಲ್ಲಿ ಮುಸ್ಲಿಮರ ಕೊಡುಗೆ ಏನೆಂದು ಕೂಡ ತಿಳಿಯದೆ,
ಮೇಲೆ ಹೇಳಿದ ಮುಸ್ಲಿಂ ನೇತಾರರುಗಳ ಹೆಸರುಗಳು ಅನ್ಯವಾಗಿ ಹೋಗುತ್ತಿದೆ. ಅವರು ಕಲಿತುಕೊಂಡಿರುವ ಶಾಲೆ, ಪಾಠ ಪುಸ್ತಕಗಳಿಂದೆಲ್ಲಾ ಬಹುತ್ಯೇಕ ಹೆಸರುಗಳನ್ನು ಅಳಿಸಿ ಬಿಟ್ಟಿರುತ್ತಾರೆ. 70ನೇ ಸ್ವಾತಂತ್ರ್ಯ ಸಂಗ್ರಾಮ ಸಂಭ್ರಮದ  ಈ ವೇಳೆಯಲ್ಲಿ ನಾವು ನಮ್ಮ ಮಕ್ಕಳಿಗೆ, ಭಾರತ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ ನಮ್ಮ ಪೂರ್ವಿಕರ ಜೀವನ ಚರಿತ್ರೆಯ  ಕುರಿತುಳ್ಳ ಈ ಸಂದೇಶ ತಿಳಿಸಿಕೊಡಬೇಕಾಗಿದೆ.
 ಅದು ಈ ಕಾಲದ ಬೇಡಿಕೆಯಾಗಿದೆ.

ಇನ್ಶಾ ಅಲ್ಲಾಹ್.

✍ _ಗಫೂರ್ ಬಾಯಾರ್_ 

Comments

Unknown said…
Masha Allah super article...

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...